X
ಭವ್ಯಶ್ರೀ ರೈ
Actress

ಭವ್ಯಶ್ರೀ ರೈ ಜೀವನ ಚರಿತ್ರೆ

ಭವ್ಯಶ್ರೀ ರೈ ಕನ್ನಡ ಚಿತ್ರರಂಗ ಮತ್ತು ಕಿರುತೆರಯಲ್ಲಿ ಸಕ್ರಿಯವಾಗಿರುವ ನಟಿ. ಮಂಗಳೂರು ಮೂಲದ ಇವರು ಒಬ್ಬ ನಟಿಯಾಗಿ ಮಾತ್ರವಲ್ಲದೇ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಕೂಡ ಪ್ರಸಿದ್ಢರು. ಪಿಯುಸಿಯನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮುಗಿಸಿದ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ.

ಶಿರಡಿ ಸಾಯಿಬಾಬಾರ ಭಕ್ತೆಯಾಗಿರುವ ಇವರು ದೈವನಿಯತಿಯಲ್ಲಿ ನಂಬಿಕೆಯನ್ನು ಹೊಂದಿದ್ದಾರೆ.


1992 ರಲ್ಲಿ ತೆರೆಕಂಡ ವಿಷ್ಣುವರ್ಧನ್‌ರ `ರಾಜಾಧಿರಾಜ' ಚಿತ್ರದಿಂದ ಬೆಳಕಿಗೆ ಬಂದ ಇವರು ನಂತರ ಶಿವರಾಜಕುಮಾರ್ `ಮುತ್ತಣ್ಣ' ಚಿತ್ರದಲ್ಲಿ ನಟಿಸಿದರು. 1992-2006 ರ ವರೆಗೆ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಇವರು ಕೆಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದರು.


2010 ಎಪ್ರಿಲ್ 26 ರಂದು ತಮ್ಮ ಸಹನಟ ಮತ್ತು ದೂರದ ಸಂಬಂಧಿ ಸುರೇಶ್ ರೈ ಅವರೊಂದಿಗೆ ಮಂಗಳೂರಿನ ಕಟೀಲು ಕ್ಷೇತ್ರದಲ್ಲಿ ಸರಳವಾಗಿ ಮದುವೆಯಾದರು. ಈ ಜೋಡಿ ಕೆಲವು ಚಿತ್ರಗಳಲ್ಲಿ ಮತ್ತು `ಕುಂಕುಮ ಭಾಗ್ಯ' ಮುಂತಾದ ಧಾರಾವಾಹಿಗಳಲ್ಲಿ ಒಟ್ಟಾಗಿ ನಟಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+