ಚೈತ್ರ ಎಚ್.ಜಿ
Born on 18 Jun 1984 (Age 38) ಬೆಂಗಳೂರು
ಚೈತ್ರ ಎಚ್.ಜಿ ಜೀವನಚರಿತ್ರೆ
ಚೈತ್ರ ಇವರು ಜನಿಸಿದ್ದು 18 ಜೂನ್ 1984 ರಲ್ಲಿ. ಇವರು ತಮ್ಮ ವಿದ್ಯಾಭ್ಯಾಸವನ್ನೆಲ್ಲ ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಇವರ ತಂದೆ ತಬಲ ನುಡಿಸುವುದರಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಇವರ ತಂದೆ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸದ ನಂತರ ಸಂಗೀತ ಕಲಿಯುವುದರಲ್ಲಿ ಆಸಕ್ತಿಯನ್ನು ವಹಿಸಿ ಇಂದು ಹಿನ್ನಲೆ ಗಾಯಕಿಯಾಗಿ ಗುರುತಿಸಿಕಂಡಿದ್ದಾರೆ.
ಹೀಗೆ ಸಂಗೀತವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಬಂದ ಇವರು ಹಲವು ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಸಂಗೀತವನ್ನು ನೀಡಿ. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಹೀಗೆ ಇವರು ಸುಮಾರು ೫೦೦ ಗೀತೆಗಳಿಗೆ ಹಿನ್ನಲೆ ಗಾಯಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.