1980 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ ಚಿರಂಜೀವಿ ಸರ್ಜಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ಬಾಲ್ಡ್ವಿನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನಲ್ಲಿರುವ ವಿಜಯ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಇವರ ಕಿರಿಯ ಸಹೋದರ ಹಾಗೂ ಕನ್ನಡದ ಮೇರುನಟ ದಿವಂಗತ ಶಕ್ತಿ ಪ್ರಸಾದ್ ಇವರ ಅಜ್ಜ.
ಸಿನಿಜೀವನ:
ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈಕೆಳಗೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರು, 2009ರಲ್ಲಿ ತೆರೆಕಂಡ "ವಾಯುಪುತ್ರ" ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಸುಮಾರು ಒಂದು ದಶಕದ ಸಿನಿಪಯಣದಲ್ಲಿ ಹಲವಾರು ಭಿನ್ನ-ಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಇವರು ಯುವಸಾಮ್ರಾಟ್ ಅಂತಲೇ ಖ್ಯಾತಿ ಗಳಿಸಿದರು.
ವಿವಾಹ: ಚಿರಂಜೀವಿ ಸರ್ಜಾ 2018 ಮೇ 3ರಂದು ನಟಿ ಮೇಘನಾ ರಾಜ್ ಜೊತೆ ಸಪ್ತಪದಿ ತುಳಿದಿದ್ದರು.
ನಿಧನ: 2020 ಜೂನ್ 7ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿರು, ಹೃದಯಾಘಾತದಿಂದ ತಮ್ಮ 39ನೇ ವಯಸ್ಸಿನಲ್ಲಿ ವಿಧಿವಶರಾದರು.