twitter
    Celebs»Daisy Bopanna»Biography

    ಡೈಸಿ ಬೋಪಣ್ಣ ಜೀವನಚರಿತ್ರೆ

    ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಕ್ರಿಯವಾಗಿರುವ ನಟಿ. ಪಂಚ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡೈಸಿ ಉಪೇಂದ್ರ, ಶಿವಣ್ಣ,ದರ್ಶನ್,ಕಮಲ್ ಹಾಸನ್,ಮಮ್ಮೂಟಿ ,ಅಕ್ಷಯ ಕುಮಾರ್ ಮುಂತಾದ ಟಾಪ್ ನಟರೊಂದಿಗೆ ನಟಿಸಿದ್ದಾರೆ.

    ವೈಯಕ್ತಿಕ ಜೀವನ

    1982 ರಲ್ಲಿ ಕೊಡಗಿನಲ್ಲಿ ಜನಿಸಿದ ಡೈಸಿ ಅರಬಿಂದೋ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿದರು. ನಂತರ ಬೆಂಗಳೂರಿನ ಚಿತ್ರಕಲಾ ಪರಿಷತ್ ನಿಂದ ಲಲಿತಾ ಕಲಾ ವಿ‍ಷಯದಲ್ಲಿ ಪದವಿ ಪಡೆದರು. 2011 ರಲ್ಲಿ ಪ್ರಕಾಶ್ ಜಾಜುರವರ ಪುತ್ರ ಅಮಿತ್ ಜಾಜುರವರನ್ನು ಮದುವೆಯಾಗಿ ಮುಂಬೈನಲ್ಲಿ ನೆಲೆಸಿದ್ದಾರೆ.

    ರಂಗಪ್ರವೇಶ ಮತ್ತು ಸಿನಿಪಯಣ

    ಬಿ.ಜಯಶ್ರೀರವರ ಸ್ಪಂದನ ನಾಟಕ ತಂಡದಲ್ಲಿ ಕೆಲಕಾಲ ನಾಟಕಗಳಲ್ಲಿ ನಟಿಸುತ್ತ್ತಿದ್ದ ಡೈಸಿ ಕವಿತಾ ಲಂಕೇಶ್‌ರ `ಬಿಂಬ' ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. ಈ ಚಿತ್ರ ಕೆಲವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯಿತು. ಆದರೆ ಇವರು ಒಬ್ಬ ಕಮರ್ಷಿಯಲ್ ನಾಯಕನಟಿಯಾಗಿ ಹೊರಹೊಮ್ಮಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರ `ಭಗವಾನ್' ಚಿತ್ರದಿಂದ. ನಂತರ ತೆಲುಗುವಿನಲ್ಲಿ ರವಿತೇಜ ಜೊತೆ `ಚಂಟಿ' ಚಿತ್ರ ಮಾಡಿದರು. ಪ್ರಿಯದರ್ಶನ್ ನಿರ್ದೇಶನದ ಕಿಲಾಡಿ ಅಕ್ಷಯಕುಮಾರ್ ಅಭಿನಯದ `ಗರಂ ಮಸಲಾ' ಚಿತ್ರದಿಂದ ಬಾಲಿವುಡ್ ಪ್ರವೇಶಿಸಿದರು.ಕನ್ನಡದಲ್ಲಿ ರಮೇಶ್ ಜೊತೆ `ಸತ್ಯವಾನ್ ಸಾವಿತ್ರಿ' ಮತ್ತು ಕಮಲ್ ಹಾಸನ್ ಜೊತೆ `ರಾಮ ಶ್ಯಾಮ ಭಾಮ' ಚಿತ್ರದಲ್ಲಿ ನಟಿಸಿದ

    ನಂತರ ಕೆಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದರು.

    ಗರಂ ಮಸಾಲಾ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಬೆನ್ನೆಲೆಬು ಸ್ತಾನಪಲ್ಲಟ ಸಮಸ್ಯೆಯಿಂದ ಬಳಲಿದ ಡೈಸಿ ಶಸ್ತ್ರಚಿಕಿತ್ಸೆಯ ನಂತರ ಕೆಲಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ನಂತರ ಚಿತ್ರರಂಗಕ್ಕೆ ಮರಳಿದರೂ ವೀಪರೀತ ನೃತ್ಯವಿರದ ಸಾಫ್ಟ್ ಪಾತ್ರಗಳಲ್ಲಿ ನಟಿಸತೊಡಗಿದರು.

    ಕೇವಲ ಚಿತ್ರನಟಿಯಾಗಿರದೇ ಮಾಡೆಲ್ ಕೂಡ ಆಗಿದ್ದ ಡೈಸಿ ಸುಮಾರು 150 ಜಾಹೀರಾತುಗಳಲ್ಲಿ ನಟಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X