ಡ್ಯಾನಿಶ್ ಅಕ್ತರ್ ಸೈಫಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಇವರು ಹಿಂದಿಯ ಪ್ರಸಿದ್ಧ ಸೀರಿಯಲ್ `ಸಿಯಾ ಕೇ ರಾಮ್' ದಿಂದ ಸಿನಿಪಯಣ ಆರಂಭಿಸಿದರು. ಈ ಸೀರಿಯಲ್‌ನಲ್ಲಿ ಕನ್ನಡಿಗ ಜಯರಾಮ್ ಕಾರ್ತೀಕ್ (ಜೆಕೆ) ರಾವಣ ಪಾತ್ರಧಾರಿಯಾಗಿ ಮಿಂಚಿದ್ದರು.
ಬಿಹಾರ್ ಮೂಲದ ಡ್ಯಾನಿಶ್ ವೃತ್ತಿಯಲ್ಲಿ ಕುಸ್ತಿಪಟು.ಒಂದು ಕುಸ್ತಿ ಸ್ಫರ್ಧೆಯಲ್ಲಿ ಇವರನ್ನು ನೋಡಿದ ನಿರ್ದೇಶಕ ನಿಖಿಲ್ ಸಿನ್ಹಾ ತಮ್ಮ ಧಾರಾವಾಹಿ `ಸಿಯಾ ಕೇ ರಾಮ್'ದಲ್ಲಿ ನಟಿಸಲು ಮನವೊಲಿಸಿದರು. ಈ ಸೀರಿಯಲ್‌ನಲ್ಲಿ ಹನುಮಾನ್ ಪಾತ್ರಧಾರಿಯಾಗಿ ಎಲ್ಲರ ಮನಗೆದ್ದರು.ನಂತರ `ಮಹಾಕಾಳಿ' ಎಂಬ ಇನ್ನೊಂದು ಸೀರಿಯಲ್‌ನಲ್ಲಿ ನಟಿಸಿದರು.
ದರ್ಶನ್‌ರ `ಕುರುಕ್ಷೇತ್ರ' ಚಿತ್ರದ ಮೂಲಕ ಡ್ಯಾನಿಶ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ದುರ್ಯೋಧನನಾಗಿ ನಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಭೀಮನಾಗಿ ಹೋರಾಡಲಿದ್ದಾರೆ.ಕುರುಕ್ಷೇತ್ರ ನಂತರ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಥ್ರಿಲ್ಲರ್ ಚಿತ್ರ `ಉದ್ಘರ್ಷ' ಮತ್ತು ಕಿಚ್ಚ ಸುದೀಪ್‌ರ ಕೋಟಿಗೊಬ್ಬ-3 ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.