ದೀಪಕ್ ಶೆಟ್ಟಿ
ದೀಪಕ್ ಶೆಟ್ಟಿ ಜೀವನಚರಿತ್ರೆ
ದೀಪಕ್ ಶೆಟ್ಟಿ ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭಾವಂತ ನಟ. ತಮ್ಮ ಖಡಕ್ ಲುಕ್ ಮತ್ತು ಮೊನಚಾದ ನೋಟದಿಂದ ಹಲವಾರು ಚಿತ್ರಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ನಾಟಕ ಮಾಡಿದ ಇವರು ಮುಂದೆ ಅಭಿನಯದಲ್ಲಿ ಅಭಿರುಚಿ ಹೊಂದಿ `ಕಾದಂಬರಿ' ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡ್ಕೊಂಡು, ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.
ಧಾರವಾಹಿಯಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ ಮೇಲೆ ಮತ್ತೊಂದು ಹೆಜ್ಜೆ ಮುಂದೆ ಹೋದ ದೀಪಕ್ ಶೆಟ್ಟಿ, ಎಲ್ಲರಂತೆ ಫೋಟೋಶೂಟ್ ಮಾಡಿಸಿ, ಕೈಯಲ್ಲಿ ಆಲ್ಬಂ ಇಡ್ಕೊಂಡು ಅವಕಾಶಕ್ಕಾಗಿ ಗಾಂಧಿನಗರದ ತಿರುಗಾಡಿದ್ದರು. ಆದ್ರೆ, ಅವರಿಗೆ ಎದುರುಗಾಗಿದ್ದು ನಿರಾಸೆ ಮಾತ್ರ. ಶಿವಧ್ವಜ ನಿರ್ದೇಶನದ 'ನೀನೇ ನೀನೇ' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದರು. ಆದ್ರೆ, ಅದು ಮುಂದಿನ ಹಾದಿಗೆ ಮೆಟ್ಟಿಲಾಗಲಿಲ್ಲ. ಇದರಿಂದ ಬೇಸರಗೊಂಡ ಅವರು ಇದು ನಮ್ಮಂತವರಿಗಲ್ಲ ಎಂದು ಊರಿನ ಕಡೆ ಹೋಗಿಬಿಟ್ಟರು. ನಂತರ 2009 ರಲ್ಲಿ ದುಬೈ ಏರ್ ಲೈನ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು.
ಒಂದು ಸರಿ ಬಣ್ಣದ ಹಚ್ಚಿದ ದೇಹವಾಗಿದ್ದರಿಂದ ಆ ನಂಟು ಮತ್ತೆ ಇಂಡಸ್ಟ್ರಿಗೆ ಕರೆದುಕೊಂಡ ಬಂತು. ಮತ್ತೆ 2014ರಲ್ಲಿ ಧಾರವಾಹಿಯಲ್ಲಿ ನಟಿಸಲು ಶುರು ಮಾಡಿದರು. 'ಲವಲವಿಕೆ' ಎಂಬ ಧಾರವಾಹಿಯಲ್ಲಿ ನಾಯಕ ನಟನಿಗೆ ಅಪ್ಪನ ಪಾತ್ರ ನಿಭಾಯಿಸಿದರು. ದೀಪಕ್ ಅವರ ಪ್ರತಿಭೆ ಗುರುತಿಸಿದ್ದ ನಿರ್ದೇಶಕ ನಂದಕಿಶೋರ್ 'ಟೈಗರ್' ಚಿತ್ರದಲ್ಲಿ ಖಳನಾಯಕನಾಗುವ ಅವರ ಅವಕಾಶ ಕೊಟ್ಟರು. ಅಲ್ಲಿಂದ ತನ್ನ ಅಭಿನಯವನ್ನೇ ಬಂಡವಾಳ ಮಾಡಿಕೊಂಡ ದೀಪಕ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಬೇಡಿಕೆಯ ಖಳನಟರಲ್ಲಿ ಒಬ್ಬರಾಗಿದ್ದಾರೆ.