X
ದೇವರಾಜ್
Actor

ದೇವರಾಜ್ ಜೀವನ ಚರಿತ್ರೆ

ದೇವರಾಜ್ ಅವರು ಜನಿಸಿದ್ದು 20 ಸೆಪ್ಟೆಂಬರ್ 1960 ಬೆಂಗಳೂರಿನಲ್ಲಿ. ಇವರು ಕನ್ನಡ ಚಿತ್ರರಂಗವನ್ನು ಪ್ರವೇಶ ಪಡೆಯುವ ಮೊದಲು ಎಚ್ಎಂಟಿ ಕಂಪನಿಯಲ್ಲಿ 9 ವರ್ಷ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ರಂಗಭೂಮಿಯ ಮೂಲಕ ಇವರು ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಖಳನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಕಂಚಿನ ಕಂಠ ಮತ್ತು ಖಡಕ್ ಅಭಿನಯದಿಂದ ಬಹುಬೇಗನೆ ಗುರುತಿಸಿಕೊಂಡರು.1988 ರಲ್ಲಿ ಬಿಡುಗಡೆಗೊಂಡ 27 ಮಾವಳ್ಳಿ ಸರ್ಕಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ಆವೇಶ (1990) ಚಿತ್ರವೂ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿ ದೇವರಾಜ್ ಆಗಿರುವವರು ಡೈನಾಮಿಕ್ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ.ಇವರು ನಟಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಕನ್ನಡ ಚಿತ್ರರಂಗದಲ್ಲಿ ದಾಖಲೆ ಗಳಿಕೆ ಕಂಡು ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸ ಬರೆಯಿತು. ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ತಮ್ಮ ನಟನೆ ಮೂಲಕ ಗುರುತಿಸಿಕೊಂಡಿದ್ದಾರೆ.

1986 ರಲ್ಲಿ ಚಂದ್ರಲೇಖ ಅವರ ಜೊತೆ ವಿವಾಹವಾದ ದೇವರಾಜ್ ರಿಗೆ ಇಬ್ಬರು ಪುತ್ರರು. ಪ್ರಜ್ವಲ್ ದೇವರಾಜ್ ಮತ್ತು ಪ್ರಣಮ್ ದೇವರಾಜ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+