ತನ್ನ ಕಂಚಿನ ಕಂಠದ ಮೂಲಕವೇ ಕನ್ನಡ ಸಿನಿರಸಿಕರ ಮನಗೆದ್ದ ಧೀರೇಂದ್ರ ಗೋಪಾಲ್ ಕನ್ನಡದ ಧೀಮಂತ ನಟ. ಹೊಳೆನರಸೀಪುರದಲ್ಲಿ ಜನಿಸದ ಇವರು ಒಮ್ಮೆ ಶಾಲೆಯಲ್ಲಿ ಏಕ ಪಾತ್ರಾಭಿನಯದ ನಾಟಕ ಮಾಡುತ್ತಿದ್ದಾಗ ಇವರ ಅಭಿನಯವನ್ನು ನೋಡಿದ ಗುಬ್ಬಿ ವೀರಣ್ಣ ಇವರನ್ನು ತಮ್ಮ ನಾಟಕ ಕಂಪನಿಗೆ ಸೇರುವಂತೆ ಆಹ್ವಾನ ನೀಡುತ್ತಾರೆ. `ಟಿಪ್ಪು ಸುಲ್ತಾನ',`ಮುದಕನ ಮದುವೆ' ಮುಂತಾದ ನಾಟಕಗಳ ಮುಖಾಂತರ ಜನಪ್ರಿಯರಾದರು. ಅದರಲ್ಲಿಯೂ ಇವರ `ಎಚ್ಚೆಮ್ಮ ನಾಯಕ' ಪಾತ್ರ ಇವರಿಗೆ ವಿಶಿಷ್ಟತೆ ದೊರೆಕಿಸಿಕೊಟ್ಟಿತು.
ಸಿನಿಪಯಣ
1974ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ `ನಾಗರಹಾವು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಧೀರೇಂದ್ರರು ಮುಂದೆ `ಪಡುವಾರಹಳ್ಳಿ ಪಾಂಡವರು' ಚಿತ್ರದಲ್ಲಿನ ಖಳನಾಯಕನ ಪಾತ್ರದಿಂದ ಜನಪ್ರಿಯರಾದರು.ನಂತರ ಸುಮಾರು 180 ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ನಿಂದ ಪ್ರಸಿದ್ಧಿ ಪಡೆದರು. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರು ಸುಮಾರು 300 ರಾಜಕೀಯ ವ್ಯಂಗಭರಿತ ಧ್ವನಿಸುರಳಿಗಳನ್ನು ರಿಕಾರ್ಡ ಮಾಡಿ ಬಿಡುಗಡೆಗೊಳಿಸಿದ್ದಾರೆ.
ಅಂತಿಮ ವಿದಾಯ
ಸುಮಾರು 1999 ರ ಸುಮಾರಿಗೆ ಜಾಂಡೀಸ್ ಗೆ ತುತ್ತಾದ ಇವರು ನಂತರ ಹರಿಹರದ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೆ ತುತ್ತಾದರು. ಇವರು ನಟಿಸಿದ ಕೊನೆಯ ಚಿತ್ರ ಎಸ್.ನಾರಾಯಣರವರ `ಅಂಜಲಿ ಗೀತಾಂಜಲಿ'.
ಈಗಲೂ ಎಷ್ಟೋ ಟಿವಿ ಚಾನೆಲಗಳು ತಮ್ಮ ಹಾಸ್ಯ ಕಾರ್ಯಕ್ರಮಗಳಿಗೆ ಧೀರೆಂದ್ರ ಗೋಪಾಲ್ ರ ಧ್ವನಿ ಅನುಕರಣೆಯನ್ನು ಬಳಸಿಕೊಳ್ಳುವುದು ಇವರ ಪ್ರಸಿದ್ಧಿಗೆ ಸಾಕ್ಷಿ.
ಅದರಲ್ಲಯೂ ಇವರ `ಶಿವನೇ ಶಾಂಭುಲಿಂಗ' ಡೈಲಾಗ್ ಈಗಲೂ ಪ್ರಸಿದ್ಧಿ.
ಪ್ರಸಿದ್ಧ ಚಿತ್ರಗಳು
ನಾಗರಹಾವು
ಪಡುವಾರಹಳ್ಳಿ ಪಾಂಡವರು
ಸಾಹಸಸಿಂಹ
ಗಜಪತಿ ಗರ್ವಭಂಗ
ಕಲ್ಯಾಣ ಮಂಟಪ
ಪ್ರಸಿದ್ಧ ವಿಡಂಬನಾತ್ಮಕ ನಗೆನಾಟಕ ಧ್ವನಿಸುರಳಿಗಳು
ಹಾಯ್ ಬೆಂಗಳೂರು
ರೌಡಿ ರಾಜಕೀಯ
ಕಂತ್ರಿ ಕಾಳಯ್ಯ
ಡಗಾರ್ ಮೇಷ್ಟ್ರು
ವೀರಪ್ಪನ್
ಎದ್ದೇಳು ಭಾರತೀಯ
ಹುಲ್ಲುತಿಂದ ಭೂಪ
ಕಂತ್ರಿ ಮಂತ್ರಿ
ಬೈಟು ಭೈರಪ್ಪ
ಭಂಡ ಬಡ್ಡೀಮಗ