ದೀಲೀಪ್ ರಾಜ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಇವರು 1978ರ ಸೆಪ್ಟಂಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲಿಯೇ ನೃತ್ಯ ನಿರ್ದೇಶನದಲ್ಲಿ ಮುಂಚೂಣಿಯಲಿದ್ದ ಇವರು ಮುಂದೆ ನಟರಂಗ ಮತ್ತು ದೃಷ್ಠಿ ನಾಟಕ ತಂಡಗಳನ್ನು ಸೇರಿದರು.
ಕಿರುತೆರೆ ಪ್ರವೇಶ
ಕಿರುತೆರೆ ನಟಿ ನಂದಿತಾ ಅವರ ಪರಿಚಯದ ಮೂಲಕ `ಕಂಬದ ಮನೆ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ಪಡೆದ ಇವರು, ನಂತರ ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಪ್ರೀತಿಗಾಗಿ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದರು.
ಸ್ಯಾಂಡಲ್‌ವುಡ್ ಎಂಟ್ರಿ
ನಟ ದಿಲೀಪ್ ರಾಜ್ 2005ರಲ್ಲಿ ತೆರೆಕಂಡ `ಭಾಯ್ ಫ್ರೆಂಡ್' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. 2007ರಲ್ಲಿ `ಮಿಲನ' ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದರು. ನಂತರ 7 ಓ ಕ್ಲಾಕ್, ಕ್ಷಣ ಕ್ಷಣ ಚಿತ್ರಗಳಲ್ಲಿ ನಟಿಸಿದರು. `ರಥಸಪ್ತಮಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ ದಿಲೀಪ್, ಕೆಲ ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿದರು.
ದಿಲೀಪ್ ರಾಜ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯನ್ನು ಅವರೇ ನಿರ್ಮಾಣ ಮಾಡ್ತಿದ್ದಾರೆ.