twitter
    Celebs»Disco Shanti»Biography

    ಡಿಸ್ಕೋ ಶಾಂತಿ ಜೀವನಚರಿತ್ರೆ

    ಡಿಸ್ಕೋ ಶಾಂತಿ 90 ರ ದಶಕದಲ್ಲಿ ಕನ್ನಡ ,ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಓರಿಯಾ ಚಿತ್ರರಂಗಗಳಲ್ಲಿ ತಮ್ಮ ಕ್ಯಾಬರೆ ನೃತ್ಯಗಳಿಂದ ಪ್ರಸಿದ್ಧರಾಗಿದ್ದ ನಟಿ.ಆಗಿನ ಕಾಲದ ಮುಖ್ಯವಾಹಿನಿಯ ನಟಿಯರು ಕ್ಯಾಬರೆ ನೃತ್ಯಗಳಿಗೆ ಹೆಜ್ಜೆ ಹಾಕಲು ಹಿಂಜರಿಯುತ್ತಿದ್ದಾಗ ಡಿಸ್ಕೋ ಶಾಂತಿಯ ಪ್ರವೇಶವಾಯಿತು. ಇವರ ಮೊದಲಿನ ಹೆಸರು ಶಾಂತಾಕುಮಾರಿ.

     

    1965, ಆಗಸ್ಟ್ 28 ರಂದು ತಮಿಳುನಾಡಿನ ಚೆನ್ನ್ನೈನಲ್ಲಿ ಜನಿಸಿದರು. ತಂದೆ ಆನಂದನ್ ತಮಿಳು ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. 1985 ರಲ್ಲಿ ತೆರೆಕಂಡ ತಮಿಳಿನ ಸಾವಿ ಚಿತ್ರದಲ್ಲಿ ಕ್ಲಬ್ ಡ್ಯಾನ್ಸರ್ ಪಾತ್ರದಲ್ಲಿ ಮಿಂಚುವ ಮೂಲಕ ಸಿನಿರಂಗ ಪ್ರವೇಶಿಸಿದರು. ಕನ್ನಡದಲ್ಲಿ 1986 ರಲ್ಲಿ ತೆರೆಕಂಡ ಆಪ್ರಿಕಾದಲ್ಲಿ ಶೀಲಾ ಚಿತ್ರದ ಮೂಲಕ ನೃತ್ಯಗಾರ್ತಿಯಾಗಿ ಪರಿಚಯಗೊಂಡರು. ನಂತರ ಹುಲಿ ಹೆಬ್ಬುಲಿ, ಜಯಸಿಂಹ, ನಮ್ಮೂರ ರಾಜ ,ಅಂಜದ ಗಂಡು ಮುಂತಾದ ಚಿತ್ರಗಳಲ್ಲಿ ಕ್ಯಾಬರೆ ಡ್ಯಾನ್ಸ್ ಮಾಡಿದರು. ಶಂಕರನಾಗ್ ರ ಸಾಂಗ್ಲಿಯಾನ ಚಿತ್ರದ `ದೂರದ ಊರಿನಿಂದ' ಹಾಡು ಪ್ರಸಿದ್ಧಿಯಾಯಿತು.

     

    1996 ರಲ್ಲಿ ತೆಲಗು ಚಿತ್ರರಂಗದ ಸೂಪರಸ್ಟಾರ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ನಟ ಶ್ರೀಹರಿಯನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ನಾಲ್ಕು ತಿಂಗಳಿದ್ದಾಗಲೇ ಮಡಿದ ಇವರ ಪುತ್ರಿ ಅಪೇಕ್ಷಾ ನೆನಪಿನಲ್ಲಿ `ಅಪೇಕ್ಷಾ ಫೌಂಡೇಶನ್' ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಪತಿ ಶ್ರೀಹರಿ 2013 ರಲ್ಲಿ ವಿಧಿವಶರಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X