ದಿವ್ಯಾ ಉರುಡುಗ ಜೀವನಚರಿತ್ರೆ

  ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‌ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಸಿದರು.

  ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ ಶಾಲಾದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರಿಗೆ ಕಿರುತೆರೆಯಲ್ಲಿ ನಟಿಸಿಲು ಆಫರ್ ಬಂತು.ಕಿರುತೆರೆಯಲ್ಲಿ `ಚಿಟ್ಟೆ ಹೆಜ್ಜೆ',``ಅಂಬಾರಿ',`ಖುಷಿ', `ಓಂ ಶಕ್ತಿ ಓಂ ಶಾಂತಿ' ಸೀರಿಯಲ್‌ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.

  2017 ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ `ಹುಲಿರಾಯ' ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು.ರಾಜಕೀಯ ಆಧಾರಿತ `ಧ್ವಜ' ಮತ್ತು `ಫೇಸ್ 2 ಪೇಸ್' ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X