twitter
    Celebs»Ganavi laxman»Biography

    ಗಾನವಿ ಲಕ್ಷ್ಮಣ ಜೀವನಚರಿತ್ರೆ

    ಗಾನವಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡ ಕಿರುತೆರೆಯಲ್ಲಿ ಜಾನಕಿ ಎಂದೇ ಪ್ರಸಿದ್ಧರಾಗಿರುವ ಗಾನವಿ ಮೂಲತಃ ಚಿಕ್ಕಮಗಳೂರಿನವರು. ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ಸ್ ಕುಟುಂಬದಲ್ಲಿ ಜನಿಸಿದ ಗಾನವಿಗೆ ನಟನೆಗಿಂತ ನೃತ್ಯದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದ ಗಾನವಿಗೆ ಮೊದಮೊದಲು ನಟನೆ ಬಗ್ಗೆ ಸ್ವಲ್ಪ ಭಯವಿತ್ತು. ವಿವೇಕ್ ವಿಜಯಕುಮಾರ್ ತರಬೇತಿಯಲ್ಲಿ ರಂಗಭೂಮಿ ಸೇರಿದ ಇವರು ಬಿ.ಜಯಶ್ರೀ ಮುಂತಾದ ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿದ್ದಾರೆ.

     

    ಕಿರುತೆರೆಯಲ್ಲಿ ಹಲವು ಅವಕಾಶಗಳು ಬಂದರೂ ಸೂಕ್ತ ಪಾತ್ರಕ್ಕಾಗಿ ಕಾಯುತ್ತಿದ್ದ ಗಾನವಿ `ಟಿ.ಎನ್.ಸೀತಾರಾಮರ' ಕರೆ ಬಂದಾಗ ನಟಿಸಲು ಒಪ್ಪಿ ಆಡಿಷನ್ ನೀಡಿದರು. ಆಡಿಷನ್‌ನಲ್ಲಿ ಆಯ್ಕೆಯಾಗಿ `ಮಗಳು ಜಾನಕಿ' ಮೂಲಕ ಕರ್ನಾಟಕ ತುಂಬ ಪ್ರಸಿದ್ಧರಾದರು.ಧಾರಾವಾಹಿಗೂ ಮುಂಚೆ ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದರು. ಕ್ರಿಯೇಟಿವ್ ಡ್ಯಾನ್ಸ್ ಮೂವಮೆಂಟ್ ಎಂಬ ಡ್ಯಾನ್ಸ್ ಫಾರ್ಮ್‌ನ್ನು ಪ್ರಾಕ್ಟೀಸ್ ಮಾಡುವ ಇವರು ಯುವಜನರಿಗೆ ಮತ್ತು ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತಾರೆ.

     

    ಸಿನಿಮಾ: ರಿಷಬ್ ಶೆಟ್ಟಿ ಅಭಿನಯದ ಹೀರೋ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಗಾನವಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟನೆಯ ೧೨೫ನೇ ಸಿನಿಮಾ 'ವೇದಾ'ದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X