twitter
    Celebs»Gaurish Akki»Biography

    ಗೌರೀಶ್ ಅಕ್ಕಿ ಜೀವನಚರಿತ್ರೆ

    ಗೌರೀಶ್ ಅಕ್ಕಿ ಕನ್ನಡದ ಪ್ರಸಿದ್ಧ ನಿರೂಪಕ, ಚಿತ್ರನಟ ಮತ್ತು ನಿರ್ದೇಶಕ. ಕೊಪ್ಪಳದಲ್ಲಿ ಜನಿಸಿದ ಇವರು ಮಾಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಮಾಧ್ಯಮ ಜಗತ್ತಿನ ಸೆಳೆತದಿಂದಾಗಿ ಹೈದರಾಬಾದಿನಲ್ಲಿ ಈಟಿವಿ ಕನ್ನಡ ಚಾನಲ್‌ಗೆ ಸೇರಿದರು. 2005ರಲ್ಲಿ `ಟಿವಿ೯ ಕನ್ನಡ ವಾಹಿನಿ ಸೇರಿ 5 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದರು. ನಂತರ `ಸುವರ್ಣ ನ್ಯೂಸ್' ಮತ್ತು `ಸುದ್ದಿ' ಚಾನೆಲ್‌ನಲ್ಲಿಯೂ ಕೆಲಸ ಮಾಡಿದ್ದಾರೆ. 


    2016ರಲ್ಲಿ ಇವರು `ಸಿನಿಮಾ ಮೈ ಡಾರ್ಲಿಂಗ್' ಎಂಬ ಚಿತ್ರದ ಕಥೆ ಬರೆದು ನಿರ್ದೇಶಿಸಿದರು. ಚಾರ್ಮಿನಾರ್, ಲೂಸಿಯಾ, ಸಿಪಾಯಿ, 3000 ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ.



     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X