X
ಹೋಮ್ » ಸೆಲಬ್ರಿಟಿಗಳು » ಗೀತಾ » ಜೀವನ ಚರಿತ್ರೆ
ಗೀತಾ
Actress

ಗೀತಾ ಜೀವನ ಚರಿತ್ರೆ

ಗೀತಾ ಕನ್ನಡ.ತೆಲುಗು,ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಕ್ರಿಯವಾಗಿರುವ ಖ್ಯಾತ ಸಿನಿತಾರೆ. ಪಂಚಭಾಷೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಗೀತಾ ಕರ್ನಾಟಕ ಮತ್ತು ಕೇರಳ ರಾಜ್ಯ ಪ್ರಶಸ್ತಿ ಜೊತೆಗೆ ಫಿಲ್ಮಫೇರ್ ಪ್ರಶಸ್ತಿ ಪಡೆದಿದ್ದಾರೆ.


1962 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.1976 ರಲ್ಲಿ ರಜನಿಕಾಂತ್ ಜೊತೆ ತಮಿಳಿನಲ್ಲಿ `ಭೈರವಿ' ಚಿತ್ರದಲ್ಲಿ ನಟಿಸುವದರೊಂದಿಗೆ ಚಿತ್ರರಂಗ ಪ್ರವೇಶಿಸಿದರು. ಆಗ ಕೇವಲ ಏಳನೇ ತರಗತಿ ಓದುತ್ತಿದ್ದರು. ನಂತರ ಓದಿಗೆ ವಿದಾಯ ಹೇಳಿ ಚಿತ್ರರಂಗದಲ್ಲಿ ಪೂರ್ಣ ತೊಡಗಿಸಿಕೊಂಡರು.1986 ರಲ್ಲಿ ತೆರೆಕಂಡ `ಪಂಚಾಗ್ನಿ' ಚಿತ್ರದಿಂದ ಖ್ಯಾತಿ ಪಡೆದರು. ನಂತರ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ದೊರೆತು ಮಲಯಾಳಂನ ಟಾಪ್ ನಟಿಯಾದರು.


1981 ರಲ್ಲಿ ತೆರೆಕಂಡ `ಹೆಣ್ಣಿನ ಸೇಡು' ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಡಾ.ರಾಜಕುಮಾರ್, ವಿಷ್ಣುವರ್ಧನ್,ಅಂಬರೀಶ್ ಮತ್ತು ಅನಂತನಾಗ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದ ಛಾಪನ್ನು ಮೂಡಿಸಿದ್ದಾರೆ. `ಅರುಣ ರಾಗ' ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಪಡೆದರು.


ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದ ವಾಸನ್ ಎಂಬುವವರನ್ನು ವಿವಾಹವಾದ ಗೀತಾ ಚಿತ್ರರಂಗಕ್ಕೆ ವಿದಾಯ ಹೇಳಿ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ಹಲವು ವರ್ಷಗಳ ನಂತರ ಮರಳಿದ ಗೀತಾರವರು ಇದೀಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+