X
ಗಿರಿಜಾ ಲೋಕೇಶ್
Actress/Actor

ಗಿರಿಜಾ ಲೋಕೇಶ್ ಜೀವನ ಚರಿತ್ರೆ

ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಕಲಾತ್ಮಕ ನಟಿ ಮತ್ತು ರಂಗಭೂಮಿ ಕಲಾವಿದೆ. ಕನ್ನಡ ಚಿತ್ರರಂಗದ ಅಚ್ಚಳಿಯದ ನಟ ಲೋಕೇಶ್ ರವರ ಧರ್ಮಪತ್ನಿ. ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಇವರ ಮಗ. ಪುತ್ರಿ ಪೂಜಾ ಲೋಕೇಶ್ ಕೂಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಭರತನಾಟ್ಯದಲ್ಲಿ ಪರಿಣಿತಿ ಪಡೆದ ಇವರು ಹದಿನಾಲ್ಕನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿದರು. ಇವರು ನಟಿಸಿದ ಮೊದಲ ನಾಟಕ `ಸಾಮ್ರಾಟ್ ಅಶೋಕ್ ಕುಮಾರ್'. ಈ ಸಮಯದಲ್ಲೇ ನಟ ಲೋಕೇಶ್ ಅವರ ಪರಿಚಯವಾಯಿತು. ಹಲವು ಭಾಷೆಗಳಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ಮೊದಲ ನಾಟಕ `ಮಾಡಿ ಮಡಿದವರು' ಎಂಬ ಸಾಮಾಜಿಕ ನಾಟಕ. ಸಾಕಷ್ಟು ನಾಟಕಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದ ಲೋಕೇಶರ ಜೊತೆ ಪ್ರೇಮಾಂಕುರವಾಗಿ ನಂತರ ಈ ಜೋಡಿ ಮದುವೆಯಾಯಿತು. ಮದುವೆಯಾದ ರಾತ್ರಿಯೇ `ಕಾಕನಕೋಟೆ' ನಾಟಕದಲ್ಲಿ ನಟಿಸಬೇಕಿತ್ತು. ಆ ದಿನ ನಾಟಕದಲ್ಲಿ ತಂದೆ ಮಗಳಾಗಿ ನಟಿಸಿದ್ದು ಈ ಜೋಡಿಯ ಕಲಾಪರತೆಗೆ ಹಿಡಿದ ಸಾಕ್ಷಿ.

ಚಿತ್ರರಂಗ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಕ್ರಿಯವಾಗಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. `ಕ್ರೇಜಿ ಕರ್ನಲ್',`ಮುತ್ತಿನ ತೋರಣ' ಇವರು ನಟಿಸಿದ ಪ್ರಮುಖ ಟೆಲಿಸೀರಿಯಲ್ ಗಳು. ಇವರು ನಟಿಸಿದ `ಭುಜಂಗಯ್ಯನ ದಶಾವತಾರಗಳು' ಮತ್ತು `ಸಿದ್ಲಿಂಗು' ಚಿತ್ರಗಳಿಗೆ ಕರ್ನಾಟಕ ರಾಜ್ಯದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+