twitter

    ಗಿರೀಶ್ ಕಾಸರವಳ್ಳಿ ಜೀವನಚರಿತ್ರೆ

    ಗಿರೀಶ್ ಕಾಸರವಳ್ಳಿ ಇವರು ಭಾರತದ ಅತ್ಯಂತ ಪ್ರತಿಭಾನಿತ್ವ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ 1950, ಡಿಸೆಂಬರ್ 03 ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು.

    ಗಿರೀಶ್ ಕಾಸರವಳ್ಳಿಯವರು ತಮ್ಮ 27 ವರ್ಷಗಳ ವೃತ್ತಿ ಜೀವನದಲ್ಲಿ 12 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ.

    ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು, ತಮ್ಮ ಪದವಿ ಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು.

    1977ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ 3 ಸ್ವರ್ಣಕಮಲಗಳನ್ನು ಪಡೆದುಕಕೊಂಡಿದ್ದಾರೆ. ಇವರು "ಘಟಶ್ರಾದ್ಧ" ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ 27. ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂದು ಹೆಸರು ಪಡೆದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X