ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1993ರ ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪತಿ ಅಭಿಷೇಕ್ ಕಾಸರಗೋಡ್ ಕನ್ನಡ ಚಿತ್ರರಂಗ ಖ್ಯಾತ ಛಾಯಾಗ್ರಾಹಕ.
ಸಿನಿಮಾರಂಗ
ಗೌತಮಿ ಜಾಧವ್ 2018ರಲ್ಲಿ ತೆರೆಕಂಡ ಕಿನಾರೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ಆದ್ಯ ಚಿತ್ರದಲ್ಲಿ ಅಭಿನಯಿಸಿದರು. ಕೆಲ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಕಿರುತೆರೆ
2020ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ 'ಸತ್ಯ' ಸೀರಿಯಲ್ ಮೂಲಕ ಗೌತಮಿ ಜಾದವ್ ಕನ್ನಡ ಕಿರುತೆರೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಟಾಮ್ ಬಾಯ್ ಪಾತ್ರದ ಮೂಲಕ ವೀಕ್ಷಕರ ಮನಗೆದ್ದರು.
ಬಿಗ್‌ಬಾಸ್: ಗೌತಮಿ ಜಾದವ್ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 4ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ.