ಹರ್ಷ ಎ ಇವರು ಜನಿಸಿದ್ದು ಅಗಸ್ಟ್ 24, 1980 ಬೆಂಗಳೂರಿನಲ್ಲಿ. ತಂದೆ ಟಿ.ಅಶೋಕ್ ತಾಯಿ ಪೂರ್ಣಿಮಾ ಅಶೋಕ್. ತಮ್ಮ ಭರತ್ ಅಶೋಕ್. ಇವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಇವರು ಬೆಂಗಳೂರಿನ ಆಕ್ಸ್ ಪರ್ಡ್ ಕಾಲೇಜ್ ನಲ್ಲಿ ಆಟೋಮೊಬೈಲ್ ನಲ್ಲಿ ಡಿಪ್ಲಮೋ ಪಡೆದುಕೊಂಡಿದ್ದಾರೆ.
ನಂತರ ಇವರು ನೃತ್ಯ ಸಂಯೋಜಕರಾಗಿ ಮುಂಗಾರು ಮಳೆ, ತಾಜ್ ಮಹಲ್, ವಿಷ್ಣುವರ್ಧನ, ಮೊಗ್ಗಿನ ಮನಸ್ಸು ಹೀಗೆ ಹಲವು ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 2007 ರಲ್ಲಿ ಬಿಡುಗಡೆಗೊಂಡ ಗೆಳೆಯ ಚಿತ್ರ ದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡರು.
ಹೀಗೆ ಇವರು ನೃತ್ಯ ಸಂಯೋಜಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಹರ್ಷ.