ಜ್ಯೋತಿ ರೈ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. 1985ರ ಫೆಬ್ರವರಿ 23ರಂದು ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ, ಪುತ್ತೂರಿನಲ್ಲಿ ಓದಿ ಬೆಳೆದರು. ಅವರಿಗೆ ಡಿಗ್ರಿ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು.
ಕಿರುತೆರೆ
ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಜೋಗುಳ, ಕಿನ್ನರಿ, ಗೆಜ್ಜೆ ಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಬಳಿಕ ತೆಲುಗು, ತಮಿಳು ಕಿರುತೆರೆಯತ್ತ ಮುಖ ಮಾಡಿದರು.
ತೆಲುಗಿನಲ್ಲಿ 'ಗುಪ್ಪೆಡಂತ ಮನಸು' ಧಾರಾವಾಹಿ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಆ ಧಾರಾವಾಹಿಯಲ್ಲಿ ಜಗತಿ ಎನ್ನುವ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ತೆಲುಗು ವೀಕ್ಷಕರಿಗೆ ಜಗತಿ ಅಂತಲೇ ಚಿರಪರಿಚಿತರಾಗಿಬಿಟ್ಟಿದ್ದಾರೆ. ಆನಂತರ ತೆಲುಗು ಕಿರುತೆರೆಯಲ್ಲೇ ಮುಂದುವರೆ ಅವರು, ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾಗಳು
ಜ್ಯೋತಿ ರೈ ಕನ್ನಡದ ದಿಯಾ, 99, ಸಪ್ಲೈಯರ್ ಶಂಕರ, ಗಂಧದ ಕುಡಿ, ಸೀತಾರಾಮ, ಮಗನೇ ಮಹಿಷಾ, 5ಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ವೆಬ್ ಸೀರಿಸ್: ಜ್ಯೋತಿ ರೈ ಸದ್ಯ ಪ್ರೆಟಿ ಗರ್ಲ್ ಎಂಬ ಹೆಸರಿನ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸೀರಿಸ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಮದುವೆ: ಜ್ಯೋತಿ ರೈ 20ನೇ ವಯಸ್ಸಲ್ಲೆ ಪದ್ಮನಾಭ್ ರೈ ಎಂಬುವವರನ್ನು ಮದುವೆ ಆಗಿದ್ದರು. ಆದರೆ, 2023ರಲ್ಲಿ ತೆಲುಗಿನ ನಿರ್ದೇಶಕ ಸುರೇಶ್ ಕುಮಾರ್ ಪೂರ್ವಜ್ ಜೊತೆ ಎರಡನೇ ಮದುವೆಯಾಗಿದ್ದಾರೆ.