ಲಕ್ಷ್ಮಿನಾರಾಯಣ ವೈದ್ಯನಾಥನ್ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಇವರು ಕನ್ನಡದ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು.
ಕನ್ನಡದಲ್ಲಿ ಸಿ.ಅಶ್ವಥ್ ರ ಜೊತೆ ಸಂಗೀತ ನೀಡುತ್ತಿದ್ದ ಇವರು `ಅಶ್ವಥ್-ವೈದಿ' ಎಂಬ ಹೆಸರಿನಿಂದ ಸಂಗೀತ ನೀಡಿದ್ದಾರೆ.