CelebsbredcrumbLakshmibredcrumbBiography

  ಲಕ್ಷ್ಮೀ ಜೀವನಚರಿತ್ರೆ

  ಕನ್ನಡ ಚಿತ್ರರಂಗದ ಚಂದನದ ಗೊಂಬೆ ಲಕ್ಷ್ಮಿ ಚತುರ್ಭಾಷಾ ತಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಲಕ್ಷ್ಮಿಯವರು ಕನ್ನಡವಲ್ಲದೇ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳೆಲ್ಲ ಸೇರಿ ಸುಮಾರಿ ನಾಲ್ಕೂನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  ಬಾಲ್ಯ

  ಆಂಧ್ರಪ್ರದೇಶದ ನೆಲ್ಲೂರಿನ ಮೂಲದವರಾದ ಇವರ ತಂದೆ ಯರಗುಡಿಪತಿ ವರದರಾವ್ ನಿರ್ದೇಶಕ ಮತ್ತು ನಟರಾಗಿ ಗುರುತಿಸಿಕೊಂಡಿದ್ದರು. ಇವರ ನಿರ್ದೇಶನದ ಹೆಚ್ಚು ಚಿತ್ರಗಳು ಸಾಮಾಜಿಕ ವಿಷಯಗಳ ಮೇಲೆ ಕೇಂದ್ರಿತವಾಗಿದ್ದವು. ಇವರ ತಾಯಿ ರುಕ್ಮಿಣಿ ಮತ್ತು ಮುತ್ತಜ್ಜಿ ಎನ್.ಜಾನಕಿ ಕೂಡ ತಮಿಳು ಚಿತ್ರರಂಗದಲ್ಲಿ ನಟಿಯರಾಗಿ ಪರಿಚಿತರು. ಕುಟುಂಬದ ಮೂರನೇ ತಲೆಮಾರಿನ ನಟಿಯಾಗಿ ಚಿತ್ರರಂಗ ಪ್ರವೇಶಿದರು. ಲಕ್ಷ್ಮಿಯವರ ಪುತ್ರಿ ಐಶ್ವರ್ಯ ಕೂಡ 1990 ರಲ್ಲಿ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು.

  ಸಿನಜೀವನ

  1968 ರಲ್ಲಿ ಕೇವಲ 15 ವರ್ಷದವರಿದ್ದಾಗಲೇ ತಮಿಳು ಚಿತ್ರ `ಜೀವನಾಂಶ' ದಿಂದ ಸಿನರಂಗ ಪ್ರವೇಶಿಸಿದರು. 1975 ರಲ್ಲಿ ಹಿಂದಿ ಭಾಷೆಯಲ್ಲಿ ತೆರೆಗೆ ಬಂದ `ಜೂಲಿ' ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. 1968 ರಲ್ಲಿ ಡಾ.ರಾಜ್ ಅಭಿನಯದ `ಗೋವಾದಲ್ಲಿ ಸಿ.ಐ.ಡಿ 999' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ನಂತರ ರಾಜ್ ಜೊತೆ `ನಾ ನಿನ್ನ ಮರೆಯಲಾರೆ' ಮತ್ತು `ಒಲವು ಗೆಲವು' ಚಿತ್ರಗಳಲ್ಲಿ ನಟಿಸಿದರು.

  ಕನ್ನಡ ಚಿತ್ರರಂಗದಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಜೋಡಿ ಆಗಿನ ಕಾಲದ ಟಾಪ್ ಜೋಡಿಯಾಗಿತ್ತು. ತರಾಸು ಕಾದಂಬರಿ ಆಧಾರಿತ ಚಿತ್ರ`ಚಂದನದ ಗೊಂಬೆ' ಮೂಲಕ ಆರಂಭವಾದ ಈ ಜೋಡಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ  ಪ್ರೇಕ್ಷಕರ ಮನ ಸೆಳೆಯಿತು. ಮಧ್ಯಮ ವರ್ಗದ ಸಮಾಜಿಕ ಸ್ಥಿತಿಗಳನ್ನು ಕನ್ನಡ ಚಲನಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿದ ಶ್ರೇಯ ಅನಂತ್-ಲಕ್ಷ್ಮಿ ಜೋಡಿಗೆ ಸಲ್ಲಬೇಕು.

  ದಕ್ಷಿಣದ ನಾಲ್ಕು ಭಾಷೆಗಳನ್ನು ನಿರ್ಗಗಳವಾಗಿ ಮಾತನಾಡುವ ಇವರು 70 ಮತ್ತು 80 ರ ದಶಕದಲ್ಲಿ ನಾಲ್ಕು ಭಾಷೆಗಳಲ್ಲಿ ಪಾರಮ್ಯ ಮೆರೆದರು.

  ಕಿರುತೆರೆ ನಿರೂಪಕಿಯಾಗಿ

  ಚಿತ್ರರಂಗದಿಂದ ಕೆಲಕಾಲ ವಿರಾಮ ಪಡೆದ ಇವರು ತಮಿಳು ,ಮಲಯಾಳಂ ಮತ್ತು ಕನ್ನಡ ಕಿರುತೆರೆಯ ಕೆಲವು ಪ್ರಮುಖ ಶೋಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ `ಇದು ಕಥೆಯಲ್ಲ ಜೀವನ' ಮತ್ತು `ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ನೆಡೆಸಿಕೊಟ್ಟಿದ್ದಾರೆ. ಜೀ ಕನ್ನಡದ `ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿಯೂ  ಪ್ರಸ್ತುತರು.

  ವೈಯಕ್ತಿಕ ಜೀವನ

  ಲಕ್ಷ್ಮಿಯವರು ತಮ್ಮ ಹದಿನೇಳನೆ ವಯಸ್ಸಿನಲ್ಲಿ ಭಾಸ್ಕರ ಎಂಬುವವರನ್ನು ಮದೆವೆಯಾದರು. ಈ ದಾಂಪತ್ಯದಿಂದ ಐಶ್ವರ್ಯ ಎಂಬ ಪುತ್ರಿಯುಂಟು. 1974 ರಲ್ಲಿ ವಿಚ್ಚೇದನ ಪಡೆದ ಲಕ್ಷ್ಮಿಯವರು 1975 ರಲ್ಲಿ ಮಲಯಾಳಂ ಚಿತ್ರ ನಿರ್ಮಾಪಕ ಮತ್ತು ನಟ ಮೋಹನ್ ಶರ್ಮಾರವರನ್ನು ಮದುವೆಯಾದರು. ಐದು ವರ್ಷದ ದಾಂಪತ್ಯದ ನಂತರ ವಿಚ್ಚೇದನ ಪಡೆದ ಇವರು 1987 ರಲ್ಲಿ ಚಿತ್ರನಿರ್ದೇಶಕ ಶಿವಚಂದ್ರನ್ ಜೊತೆ ವಿವಾಹವಾದರು. ಈ ದಂಪತಿಗಳು `ಸಂಯುಕ್ತ' ಎಂಬ ಪುತ್ರಿಯನ್ನು ದತ್ತು ತೆಗೆದುಕೊಂಡರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X