ಎಂ.ಡಿ.ಪಲ್ಲವಿ ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರತಿಭಾನ್ವಿತೆ ಗಾಯಕಿ. ಹಿನ್ನಲೆ ಗಾಯಕಿ ಮತ್ತು ಕಿರುತೆರೆ ನಿರೂಪಕಿಯಾಗಿ ಕೂಡ ಪ್ರಸ್ತುತರು. ಇವರು ಸಂಗೀತ ನಿರ್ದೇಶಕ ಅರುಣ್ ರನ್ನು ಮದುವೆಯಾಗಿದ್ದಾರೆ.
ಆರಂಭದಲ್ಲಿ ಹಲವು ವಿದ್ವಾನ್‌ರ ಅಡಿಯಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ ಪಡೆದ ಪಲ್ಲವಿ ನಂತರ ಖ್ಯಾತ ಸುಗಮ ಸಂಗೀತ ಗಾಯಕ ಮೈಸೂರು ಅನಂತಸ್ವಾಮಿಯವರ ಹತ್ತಿರ ತರಬೇತಿ ಪಡೆದರು. ನಂತರ ಹಲವು ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ನೂರಾರು ಗೀತೆಗಳಿಗೆ ಧ್ವನಿ ನೀಡಿದ್ದಾರೆ.
ರಂಗಭೂಮಿಯಲ್ಲಿ ಕೂಡ ಸಕ್ರಿಯವಾಗಿರುವ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಮತ್ತು ರಂಗ ಕಾರ್ಯಾಗಾರಗಳನ್ನು ನೆಡೆಸಿಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸಿರುವ ಪಲ್ಲವಿ `ಮಾಯಾಮೃಗ' ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಇಂಗ್ಲೀಷ್ ಚಿತ್ರ `ಸ್ಟಂಬಲ್' ಮತ್ತು ಉಮಾಶ್ರೀಯವರ `ಗುಲಾಬಿ ಟಾಕೀಸ್' ಚಿತ್ರದಲ್ಲಿ ಇವರ ಅಭಿನಯ ಗಮನಾರ್ಹ. ಹಲವು ಚಿತ್ರಗಳಲ್ಲಿ ಕಲಾವಿದರಿಗೆ ಕಂಠದಾನ ಕೂಡ ಮಾಡಿದ್ದಾರೆ.