twitter
    Celebs»Madhavi»Biography

    ಮಾಧವಿ ಜೀವನಚರಿತ್ರೆ

    ಮಾಧವಿ ಕನ್ನಡ,ತಮಿಳು,ತೆಲಗು,ಮಲಯಾಳಂ,ಹಿಂದಿ ಮತ್ತು ಓರಿಯಾ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟಿ.1962,12 ಅಗಸ್ಟ್‌ರಂದು ಶಶಿರೇಖಾ ಮತ್ತು ಗೋವಿಂದಸ್ವಾಮಿ ದಂಪತಿಗಳಿಗೆ ಹೈದರಾಬಾದಿನಲ್ಲಿ ಜನಿಸಿದರು. ಇವರು ಬಾಲ್ಯದ ಹೆಸರು ವಿಜಯಲಕ್ಷ್ಮಿ ಎಂದು. ಬಾಲ್ಯದಲ್ಲಿಯೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತ ಇವರು ಸುಮಾರು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.1976 ರಿಂದ 1996 ರ ವರೆಗಿನ ತಮ್ಮ ಎರಡು ದಶಕಗಳ ಸಿನಜೀವನದಲ್ಲಿ ಸುಮಾರು ಮುನ್ನೂರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.


    1976 ರಿಂದ ಚಿತ್ರಗಳಲ್ಲಿ ನಟನೆ ಆರಂಭಿಸಿದ ಮಾಧವಿ ಕನ್ನಡಕ್ಕೆ ಬಂದಿದ್ದು 1981 ರಲ್ಲಿ ತೆರೆಕಂಡ ರಜನಿಕಾಂತ್ ಅಭಿನಯದ `ಘರ್ಜನೆ' ಚಿತ್ರದ ಮೂಲಕ. ನಂತರ `ಹಾಲು ಜೇನು',ಚಾಣಕ್ಯ',`ಗೆದ್ದಮಗ'`ಅನುರಾಗ ಅರಳಿತು',`ಜೀವನ ಚೈತ್ರ,`ಆಕಸ್ಮಿಕ',`ಒಡಹುಟ್ಟಿದವರು' ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರೇಮಿಗಳ ಮನಸ್ಸು ಗೆದ್ದರು.


    ತಮ್ಮ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ರಾಮ್‌ರ ಸಂಪರ್ಕದಿಂದ ಅವರ ಅಮೇರಿಕನ್ ಶಿಷ್ಯರಾದ ರಾಲ್ಫ್ ಶರ್ಮಾರನ್ನು 1996 ರಂದು ಮದುವೆಯಾದರು. ರಾಲ್ಫ್ ಅಮೇರಿಕಾದಲ್ಲಿ ಫಾರ್ಮಾಸಿಟಿಕಲ್ ಉದ್ಯಮದಲ್ಲಿದ್ದಾರೆ. ಪ್ರಸ್ತುತ ಅಮೇರಿಕಾದ ನ್ಯೂಜಸಿ೯ಯಲ್ಲಿ ನೆಲೆಸಿರುವ ಮಾಧವಿಗೆ ಮೂರು ಪುತ್ರಿಯರಿದ್ದಾರೆ. ಡಾ.ರಾಜ್ ಮತ್ತು ವಿಷ್ಣುವರ್ಧನ್ ಜೊತೆ ತಲಾ  7 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.ಕನ್ನಡದಲ್ಲಿ ಇವರು ಕೊನೆಯದಾಗಿ ಅಭಿನಯಿಸಿದ ಚಿತ್ರ ಒಡಹುಟ್ಟಿದವರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X