X
ಮಾಧವಿ

ಮಾಧವಿ

Actress
ಜೀವನ ಚರಿತ್ರೆ :  ಮಾಧವಿ ಕನ್ನಡ,ತಮಿಳು,ತೆಲಗು,ಮಲಯಾಳಂ,ಹಿಂದಿ ಮತ್ತು ಓರಿಯಾ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟಿ.1962,12 ಅಗಸ್ಟ್‌ರಂದು ಶಶಿರೇಖಾ ಮತ್ತು ಗೋವಿಂದಸ್ವಾಮಿ ದಂಪತಿಗಳಿಗೆ ಹೈದರಾಬಾದಿನಲ್ಲಿ ಜನಿಸಿದರು. ಇವರು ಬಾಲ್ಯದ ಹೆಸರು ವಿಜಯಲಕ್ಷ್ಮಿ ಎಂದು. ಬಾಲ್ಯದಲ್ಲಿಯೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತ ಇವರು ಸುಮಾರು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. 1976 ರಿಂದ 1996 ರ ವರೆಗಿನ ತಮ್ಮ ಎರಡು ದಶಕಗಳ ಸಿನಜೀವನದಲ್ಲಿ ಸುಮಾರು ಮುನ್ನೂರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1976 ರಿಂದ ಚಿತ್ರಗಳಲ್ಲಿ ನಟನೆ ಆರಂಭಿಸಿದ ಮಾಧವಿ ಕನ್ನಡಕ್ಕೆ ಬಂದಿದ್ದು 1981 ರಲ್ಲಿ ತೆರೆಕಂಡ ರಜನಿಕಾಂತ್ ಅಭಿನಯದ `ಘರ್ಜನೆ' ಚಿತ್ರದ ಮೂಲಕ. ನಂತರ `ಹಾಲು ಜೇನು',ಚಾಣಕ್ಯ',`ಗೆದ್ದಮಗ'`ಅನುರಾಗ ಅರಳಿತು',`ಜೀವನ ಚೈತ್ರ,`ಆಕಸ್ಮಿಕ',`ಒಡಹುಟ್ಟಿದವರು' ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರೇಮಿಗಳ ಮನಸ್ಸು ಗೆದ್ದರು. ತಮ್ಮ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ರಾಮ್‌ರ ಸಂಪರ್ಕದಿಂದ ಅವರ ಅಮೇರಿಕನ್ ಶಿಷ್ಯರಾದ ರಾಲ್ಫ್ ಶರ್ಮಾರನ್ನು 1996 ರಂದು ಮದುವೆಯಾದರು. ರಾಲ್ಫ್ ಅಮೇರಿಕಾದಲ್ಲಿ ಫಾರ್ಮಾಸಿಟಿಕಲ್ ಉದ್ಯಮದಲ್ಲಿದ್ದಾರೆ. ಪ್ರಸ್ತುತ ಅಮೇರಿಕಾದ ನ್ಯೂಜಸಿ೯ಯಲ್ಲಿ ನೆಲೆಸಿರುವ ಮಾಧವಿಗೆ ಮೂರು ಪುತ್ರಿಯರಿದ್ದಾರೆ.  ಡಾ.ರಾಜ್ ಮತ್ತು ವಿಷ್ಣುವರ್ಧನ್ ಜೊತೆ ತಲಾ  7 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.ಕನ್ನಡದಲ್ಲಿ ಇವರು ಕೊನೆಯದಾಗಿ ಅಭಿನಯಿಸಿದ ಚಿತ್ರ ಒಡಹುಟ್ಟಿದವರು.
ಮುಂದೆ ಓದಿ

ಮಾಧವಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾಧವಿ

ಹೆಸರು ಮಾಧವಿ
ಹುಟ್ಟಿದ ದಿನ 12 Aug 1962
ವಯಸ್ಸು 64
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾಧವಿ ಆಸ್ತಿ

ಆಸ್ತಿ

ಮಾಧವಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+