CelebsbredcrumbMadhoobredcrumbBiography

  ಮಧು ಜೀವನಚರಿತ್ರೆ

  26 ಮಾರ್ಚ್ 1972 ಚೆನ್ನೈನಲ್ಲಿ ಜನಿಸಿದ ಮಧು (ಮಧು ರಂಗನಾಥ್) ಪಂಚಭಾಷಾ ನಟಿ. ಖ್ಯಾತ ಬಾಲಿವುಡ್ ನಟಿ ಹೇಮಾ ಮಾಲಿನಿ ಇವರ ಚಿಕ್ಕಮ್ಮ. ಇವರು ತಮ್ಮ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಮುಗಿಸಿದ್ದಾರೆ.ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

  ತಮಿಳಿನ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ನಿರ್ದೇಶನದ 'ಅಜಗಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಮಧು ಹಿಂದಿಯಲ್ಲಿ ಅಜಯ್ ದೇವಗನ್ ಜೊತೆ 'ಫೂಲ್ ಔರ್ ಕಾಂಟೆ' ಚಿತ್ರದಲ್ಲಿ ಅಭಿನಯಿಸಿದರು.

  1992 ರಲ್ಲಿ ತಮಿಳು ಹಾಗೂ ಹಿಂದಿಯಲ್ಲಿ ತೆರೆಗೆ ಬಂದ 'ರೋಜಾ' ಚಿತ್ರ ಇವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು. ರವಿಚಂದ್ರನ್ ಅಭಿನಯದ 'ಅಣ್ಣಯ್ಯ' ಸ್ಯಾಂಡಲ್ ವುಡ್ ಗೆ ಮಧು ಪ್ರವೇಶಿಸಿದರು. 2001 ರಿಂಬಣ್ಣದ ಲೋಕದಿಂದ ದೂರವಿದ್ದ ಮಧು 2008 ರಲ್ಲಿ ಪೋಷಕ ನಟಿಯಾಗಿ ಮತ್ತೆ ಚಿತ್ರರಂಗ ಪ್ರವೇಶಿಸಿದರು. ಸುದೀಪ್ ಅಭಿನಯದ 'ರನ್ನ', ದ್ವಾರಕೀಶ್ ರವರ 'ಚೌಕ' ಚಿತ್ರದಲ್ಲೂ ಪೋಷಕ ನಟಿಯಾಗಿ ನಟಿಸಿದ್ದಾರೆ .       

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X