Celebs » Malashri » Biography
ಜೀವನಚರಿತ್ರೆ

ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಕನ್ನಡ ನಟಿ, ಇವರು ಜನಿಸಿದ್ದು ಅಗಸ್ಟ್ 10, 1973 ರಲ್ಲಿ. ಇವರು ಮೊದಲಿಗೆ ಬಾಲ ನಟಿಯಾಗಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಈವರೆಗೆ ಸುಮಾರು 34 ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿ ಹೆಸರು ಮಾಡಿದ್ದಾರೆ.

ಇವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ "ನಂಜುಂಡಿ ಕಲ್ಯಾಣ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು. ಗಜಪತಿ ಗರ್ವಭಂಗ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ, ಚಾಮುಂಡಿ, ಕಿರಣ್ ಬೇಡಿ ಶಕ್ತಿ, ವೀರ ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇವುಗಳಲ್ಲಿ ಹಲವು ಸಿನಿಮಾಗಳು ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಹೀಗೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಇವರು ಪುರುಷನ ರೀತಿಯಲ್ಲಿ ಚಿತ್ರಗಳಲ್ಲಿ ನಟಿಸುವುದು ಇವರ ವಿಶೇಷವಾಗಿದೆ. ಇದರಿಂದ ಇವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ.

 

 

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada