ಮಾಳವಿಕಾ ಅವಿನಾಶ್ ಅವರು ಜನಿಸಿದ್ದು ತಮಿಳುನಾಡಿನಲ್ಲಿ. ತಂದೆ ಎನ್ ಗಣೇಶನ್, ತಾಯಿ ಸಾವಿತ್ರೀ. ಬಾಲ್ಯ ವಿದ್ಯಾಬ್ಯಾಸವನೆಲ್ಲ ತಮಿಳುನಾಡಿನಲ್ಲಿಯೇ ಮುಗಿಸಿದರು . ನಂತರ ಬೆಂಗಳೂರಿನಲ್ಲಿ ಲಾ ಪದವಿಯನ್ನು ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನು ಕಲಿತಿದ್ದರು.
ಮಾಳವಿಕ ಅವಿನಾಶ್ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅವಿನಾಶ್ ಅವರನ್ನು ವಿವಾಹವಾಗಿದ್ದಾರೆ. ಪದವಿ ಶಿಕ್ಷಣವನ್ನು ಪಡೆದ ನಂತರ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಹಲವು ಅವಕಾಶಗಳು ದೊರೆತವು. ಕಿರುತರೆಯ ಮೂಲಕ ಮಾಳವಿಕ ಅವರು ಕನ್ನಡದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆಡೆಸಿ ಕೊಡುವುದರ ಮೂಲಕ ಪ್ರಶಂಸೆ ಪಡೆದರು.
ರಾಜಕೀಯವಾಗಿ ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯವಾಗಿದ್ದಾರೆ.