1995 ರಲ್ಲಿ ಜನುಮದ ಜೋಡಿ ಚಿತ್ರದಿಂದ ಚಂದನವನದಲ್ಲಿ ಪಯಣ ಆರಂಭಿಸಿದರು. ನಂತರ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಇವರು ರಂಗಾಯಣದ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.
ಮೈಸೂರಿನಲ್ಲಿ ತಮ್ಮದೇ `ನಟನಾ' ಎಂಬ ಕೇಂದ್ರ ಆರಂಭಿಸಿ ಕರ್ನಾಟಕದಾದ್ಯಂತ ನಟನೆಯ ಮೇಲೆ ಹಲವು ವರ್ಕಶಾಪ್ ಮಾಡಿದ್ದಾರೆ.ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ಇವರು ಮಜಾ ಟಾಕೀಸ್ ಕಾಮಿಡಿ ಶೋದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ನಾಗಮಂಡಲ ಚಿತ್ರದ ನಟನೆಗಾಗಿ ಕರ್ನಾಟಕ ರಾಜ್ಯ ಸರ್ಕಾರದ ಅತ್ತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಸರೋಜ ಹೆಗಡೆಯವರನ್ನು ಮದುವೆಯಾಗಿರುವ ಇವರಿಗೆ ದಿಶಾ ಎಂಬ ಪುತ್ರಿಯಿದ್ದಾಳೆ..