ಮಾಸ್ಟರ್ ಕಿಶನ್ ಎಂದೇ ಹೆಸರುವಾಸಿಯಾಗಿರುವ ಕಿಶನ್ ಶ್ರೀಕಾಂತ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ರಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. 2006 ರಲ್ಲಿ `ಕೇರ್ ಆಫ್ ಪುಟಪಾತ್' ಚಿತ್ರ ನಿರ್ಮಿಸಿದ್ದಾಗ ಕಿಶನ್ ಕೇವಲ 9 ವರುಷದವಾರಾಗಿದ್ದರು.
ಬೆಂಗಳೂರಿನ ಶ್ರೀಕಾಂತ್ ಮತ್ತು ಶೈಲಜಾ ಜೋಡಿಗೆ ಜನಿಸಿದ ಶ್ರೀಕಾಂತ್ ಬಾಲ್ಯದಿಂದಲೇ ನಟನೆಗೆ ಇಳಿದರು. ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2006 ರಲ್ಲಿ ಶಾಲೆಗೆ ಹೋಗಬಯಸುವ ಒಬ್ಬ ಸ್ಲಮ್ ಹುಡುಗನ ಕನಸನ್ನು `ಕೇರ್ ಆಫ್ ಪುಟಪಾತ್' ಚಿತ್ರದಲ್ಲಿ ತೋರಿಸದ ಕಿಶನ್ ಈ ಚಿತ್ರದಲ್ಲಿ ಜಾಕಿ ಶ್ರಾಫ್, ಕಿಚ್ಚ ಸುದೀಪ್ ಮುಂತಾದ ಘಟಾನುಘಟಿ ತಾರೆಯರಿಗೆ ಆಕ್ಷ್ಯನ್ ಕಟ್ ಹೇಳಿದ್ದು ವಿಶೇಷ. ಈ ಚಿತ್ರ 11ಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಮತ್ತು ಸ್ವರ್ಣಕಮಲ ಪ್ರಶಸ್ತಿ ಪಡೆಯಿತು. ಇವರು 2014 ರಲ್ಲಿ ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.