ಕನ್ನಡ ಚಿತ್ರರಂಗದಲ್ಲಿ ನಾಯಕನಟಿಯಾಗಿ ಸಕ್ರಿಯವಾಗಿರುವ ಮೇಘನಾ ಗಾಂವಕರ್ 1985 ಮೇ 8 ರಂದು ಕಲಬುರಗಿಯಲ್ಲಿ ಜನಿಸಿದರು. ಇವರು ಕಲಬುರಗಿಯ ಶ್ರಿ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ.
ನಂತರ ಬೆಂಗಳೂರಿನ ಮಹಾವೀರ್ ಜೈನ್ ಕಾಲೇಜ್ ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಮೇಘನಾ ಆದರ್ಶ ಫಿಲ್ಮ್ ಇನ್ಸ್ ಟ್ಯೂಟ್ ನಲ್ಲಿ ಡಿಪ್ಲಮೋ ಇನ್ ಆಕ್ಟಿಂಗ್ ಆಂಡ್ ಮೆಕಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು.
ಆರ್ ಚಂದ್ರು ಅವರ ಚಾರ್ ಮಿನಾರ್ ಚಿತ್ರದಲ್ಲಿ ಮಿಂಚಿ ಭದ್ರ ನೆಲೆ ಕಂಡುಕೊಂಡಿರುವ ಮೇಘನಾ ಗಾಂವಕರ್ ಕೂಡ ಕಿರುತೆರೆಯಿಂದ ಚಿತ್ರರಂಗಕ್ಕೆ ಬಂದವರು . "ಕುಮುದ" ಎಂಬ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ರಿಯಾಲಿಟಿ ಶೋನಲ್ಲಿ ಕೂಡ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.
ಮೇಘನಾ ನಟಿಸಿದ ಸಿನಿಮಾಗಳು.