ಜೀವನಚರಿತ್ರೆ
ನಾಗತಿಹಳ್ಳಿ ಚಂದ್ರಶೇಖರ್ ಇವರು ಬರಹಗಾರರು, ನಿರ್ದೇಶಕರು, ನಿರ್ಮಾಪಕರು ಆಗಿದ್ದಾರೆ. ಇವರು ಜನಿಸಿದ್ದು  15 ಆಗಸ್ಟ್ 1958 ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬ ಗ್ರಾಮದಲ್ಲಿ . ಪ್ರಾಥಮಿಕ ಶಿಕ್ಷಣವನ್ನು  ನಾಗತಿಹಳ್ಳಿಯಲ್ಲಿ ಮುಗಿಸಿದರು. ಮುಂದೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.

ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು. 8ನೇ ತರಗತಿಯಲ್ಲಿ ಓದುತ್ತಿರುವಾಗಲೇ ಇವರು ‘ಆವರ್ತ’ ಎಂಬ ಕಥೆ ಬರೆದರು. ಇದುವರೆಗೆ ಕಥೆ, ಕಾದಂಬರಿಗಳನ್ನು ಒಳಗೊಂಡ ಇವರ 21 ಪ್ರಕಟಣೆಗಳು ಬಿಡುಗಡೆಗೊಂಡಿವೆ.  ಹೀಗೆ  ಸಿನಿಮಾಗಳಿಗೆ ನಿರ್ದೆಶನ ಮಾಡುವುದರ  ಜೊತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನ ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ

* ಧಾರಾವಾಹಿಗಳು:-    

1 ಪ್ರತಿಬಿಂಬ
2 ಕಾವೇರಿ    
3 ಭಾಗ್ಯನಮ್ಮ    
4 ಅಪಾರ್ಟ್ಮೆಂಟ್    
5 ಒಲವೇ ನಮ್ಮ ಬದುಕು    


*    ಚಲನಚಿತ್ರಗಳು                     
    
1    ಉಂಡೂ ಹೋದ ಕೊಂಡೂ‌ ಹೋದ    
2    ಬಾ ನಲ್ಲೆ ಮಧುಚಂದ್ರಕೆ            
3    ಕೊಟ್ರೇಶಿ ಕನಸು            
4    ಅಮೇರಿಕ ಅಮೇರಿಕ            
5    ಹೂಮಳೆ                    
6    ನನ್ನ ಪ್ರೀತಿಯ ಹುಡುಗಿ            
7    ಸೂಪರ್ ಸ್ಟಾರ್   
8    ಪ್ಯಾರಿಸ್ ಪ್ರಣಯ            
9    ಅಮೃತಧಾರೆ               
10    ಮಾತಾಡ್ ಮಾತಾಡು ಮಲ್ಲಿಗೆ   
11    ಒಲವೆ ಜೀವನ ಲೆಕ್ಕಾಚಾರ     
12    ನೂರು ಜನ್ಮಕ್ಕೂ           
13    ಇಷ್ಟಕಾಮ್ಯ                         
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada