X
ಹೋಮ್ » ಸೆಲಬ್ರಿಟಿಗಳು » ನಮಿತಾ » ಜೀವನ ಚರಿತ್ರೆ
ನಮಿತಾ
Actress

ನಮಿತಾ ಜೀವನ ಚರಿತ್ರೆ

ನಮಿತಾ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ಮಾಡೆಲ್. ಇವರು 1981 ರಲ್ಲಿ ಗುಜರಾತಿನ ಸೂರತ್ ನಲ್ಲಿ ಜನಿಸಿದರು.

 

ಮಾಡೆಲಿಂಗ್ ಕ್ರೇತ್ರಕ್ಕೆ ಕಾಲಿಟ್ಟ ನಮಿತಾ 1998 ರಲ್ಲಿ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮಿಸ್ ಸೂರತ್ ಆಗಿ ಹೊರಹೊಮ್ಮಿದರು. ನಂತರ 2001 ರ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್ ಅಪ್ ಆದರು. ಅಲ್ಲಿಂದ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಿಂಚಿದರು.ಮೊದಲು ಹಿಂದಿ ಚಿತ್ರರಂಗದಲ್ಲಿ ನೆಲೆಗೊಳ್ಳಲು ಪ್ರಯತ್ಸಿಸಿದ ನಮಿತಾ ಯಶಸ್ವಿಯಾಗಲಿಲ್ಲ. ನಂತರ 2002 ರಲ್ಲಿ ತೆರೆಕಂಡ `ಸೊಂತಂ' ಎಂಬ ತೆಲಗು ಚಿತ್ರದಿಂದ ಸಿನಿಪಯಣ ಆರಂಭಿಸಿದರು.ಅಲ್ಲಿಂದ ತೆಲಗು ಚಿತ್ರರಂಗದಲ್ಲಿ ಮಿಂಚಲಾರಂಭಿಸಿದ ನಮಿತಾ 2005 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿ ಅಪಾರ ಹೆಸರು ಗಳಿಸಿದರು.

 

2006 ರಲ್ಲಿ ತೆರೆಕಂಡ ರವಿಚಂದ್ರನ್ ರವರ`ನೀಲಕಂಠ' ಚಿತ್ರದಿಂದ ಕನ್ನಡದಲ್ಲಿ ನಟಿಸಲು ಆರಂಭಿಸಿದರು. ನಂತರ `ಇಂದ್ರ' `ಹೂ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ನಮಿತಾರನ್ನು 2010 ರಲ್ಲಿ ತಮಿಳುನಾಡಿನ ತ್ರೀಚಿ ಬಳಿ ಒಬ್ಬ ಅಭಿಮಾನಿ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದ.

 

2017 ರಲ್ಲಿ ತಿರುಪತಿಯಲ್ಲಿ ತಮ್ಮ ಬಹುಕಾಲದ ಗೆಳೆಯ ವೀರೇಂದ್ರ ಚೌಧರಿ ಎಂಬುವವರನ್ನು ವಿವಾಹವಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+