ನಂದಿತಾ ಕನ್ನಡ ಚಿತ್ರರಂಗದ ಪ್ರಮುಖ ಗಾಯಕಿ. ಆರ್.ವಿ. ಇಂಜನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಯಾಗಿರುವ ಇವರು ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್.ಮೊದಲು ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಂಗೀತದಲ್ಲಿನ ವೀಪರೀತ ಆಸಕ್ತಿಯಿಂದ ಉದ್ಯೋಗ ತೊರೆದು ಪೂರ್ಣ ಪ್ರಮಾಣದ ಗಾಯಕಿಯಾದರು.
ಉತ್ತಮ ವೀಣಾ ವಾದಕಿಯಾಗಿರುವ ಇವರು ವೀಣಾ ವಿದ್ವತ್ ಪರೀಕ್ಕ್ಷೆಯನ್ನು ಪಾಸ್ ಮಾಡಿದ್ದಾರೆ. ಹಂಸಲೇಖರವರ ಗರಡಿಯಲ್ಲಿ ಟ್ರಾಕ್ ಸಿಂಗರ್ ಆಗಿ ಜರ್ನಿ ಆರಂಭಿಸಿದ ಇವರು 1998 ರ ಹಬ್ಬ ಚಿತ್ರದಿಂದ ಹಿನ್ನಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇಳಯರಾಜ, ಮನೋ ಮೂರ್ತಿ, ಹಂಸಲೇಖ, ವಿ.ಮನೋಹರ್,ರಾಜೇಶ್ ರಾಮನಾಥ ಮುಂತಾದ ಸಂಗೀತ ನಿರ್ದೇಶಕರ ಸಂಗೀತಕ್ಕೆ ಧ್ವನಿಯಾದ ಶ್ರೇಯ ಇವರಿಗೆ ಸಲ್ಲಬೇಕು. ಹಲವು ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ನಂದಿತಾ ಸತತವಾಗಿ ಮೂರು ಬಾರಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪಡೆದು ದಾಖಲೆ ಮಾಡಿದ್ದಾರೆ. `ನನ್ನ ಪ್ರೀತಿಯ ಹುಡುಗಿ',`ಪ್ಯಾರಿಸ್ ಪ್ರಣಯ' ಮುಂತಾದ ಚಿತ್ರಗಳಲ್ಲಿನ ನಾಯಕಿಯ ಪಾತ್ರಕ್ಕೆ ಡಬ್ ಮಾಡಿದ್ದಾರೆ.