X
ನವೀನ ಮಯೂರ್
Actor

ನವೀನ ಮಯೂರ್ ಜೀವನ ಚರಿತ್ರೆ

ಕನ್ನಡ ಚಿತ್ರರಂಗದಲ್ಲಿ ಚಾಕಲೇಟ್ ಹೀರೋ ಎಂದೇ ಕರೆಸಿಕೊಳ್ಳುತ್ತಿದ್ದ ನವೀನ್ ಮಯೂರ್ ಸುದೀಪ್ ಅಭಿನಯದ `ಸ್ಪರ್ಶ' ಚಿತ್ರದ ಮೂಲಕ ಚಿತ್ರರಂಗಕ್ಕೆ ಆಗಮಿಸಿದರು. ನಾಯಕನಟನಾಗಿ ಮಾತ್ರವಲ್ಲದೇ ಕೆಲವು ಚಿತ್ರಗಳಲ್ಲಿ ಪೋಷಕನಟನಾಗಿಯೂ ನಟಿಸಿದ್ದಾರೆ. `ನಿನಗೋಸ್ಕರ',`ಲವಲವಿಕೆ',`ನೀಲ',`ಹಲೋ',`ನನ್ನ ಹೆಂಡತಿ ಕೊಲೆ' ಇವರು ನಟಿಸಿದ ಪ್ರಮುಖ ಚಿತ್ರಗಳು.

 

2006 ರಲ್ಲಿ ಇವರು `ಉಪ್ಪಿ ದಾದಾ' ಚಿತ್ರದಲ್ಲಿ ಇನ್ನೇನು ಕೆಲವು ದಿನಗಳಲ್ಲಿ ಸಾಯುವ ಕ್ಯಾನ್ಸರ್ ರೋಗಿಯಾಗಿ ನಟಿಸುತ್ತಾರೆ. ಆದರೆ ದುರ್ದೈವವೆಂದರೆ ನಾಲ್ಕು ವರ್ಷಗಳ ನಂತರ ನವೀನ್ ಜಾಂಡಿಸ್ ಕಾಯಿಲೆಯಿಂದ ವಿಧಿವಶರಾಗುತ್ತಾರೆ. ಕೇವಲ 32 ವರ್ಷಗಳಲ್ಲಿ ಇಹಲೋಕ ತೊರೆದ ಈ ಸ್ಪುರದ್ರೂಪಿ ನಟನ ಅಂತ್ಯಸಂಸ್ಕಾರಕ್ಕೆ ಅಂದು ಚಿತ್ರರಂಗದ ಯಾವುದೇ ಸದಸ್ಯರು ಹಾಜರಿರಲಿಲ್ಲ. ಮುಂದೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕಿದ್ದ ಪ್ರತಿಭೆ ಹೀಗೆ ಮೂಳಕೆಯಲ್ಲಿಯೇ ಬಾಡಿಹೋಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+