ಓಂ ಸಾಯಿ ಪ್ರಕಾಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ. ಇವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು.
ಕೋಡಿ ರಾಮಕೃಷ್ಣರವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ ಇವರು ನಂತರ ಸ್ವತಂತ್ರ ನಿರ್ದೇಶಕರಾದರು. ಕನ್ನಡದಲ್ಲಿ `ಅಣ್ಣ ತಂಗಿ',`ಕಿತ್ತೂರಿನ ಹುಲಿ',`ತವರಿಗೆ ಬಾ ತಂಗಿ',ಗೋಲಮಾಲ್ ರಾಧಾಕೃಷ್ಣ' ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ರಾಜಮ್ಮ ಎಂಬುವವರನ್ನು ಮದುವೆಯಾಗಿರುವ ಇವರಿಗೆ ಸಾಯಿ ಕೃಷ್ಣ ಎಂಬ ಪುತ್ರನಿದ್ದಾನೆ.