ಪಿ.ಎನ್. ಸತ್ಯ ಕನ್ನಡ ಚಿತ್ರರಂಗದ ನಿರ್ದೇಶಕ ,ನಿರ್ಮಾಪಕ ಮತ್ತು ನಟ. ಇವರ ಹಲವಾರು ಚಿತ್ರಗಳಲ್ಲಿ ರೌಡಿಸಂ ಮತ್ತು ಅಂಡರವಲ್ಡ್ ವಿಷಯಗಳು ರಾರಾಜಿಸುತ್ತಿದ್ದವು. ಸುಮಾರು 16 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಸತ್ಯ 21 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ ಮೊದಲ ಚಿತ್ರ `ಮೆಜೆಸ್ಟಿಕ್' ಇವರು ನಿರ್ದೇಶಿಸಿದ ಮೊದಲ ಚಿತ್ರ. ಈ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಒಬ್ಬ ಮಾಸ್ ನಿರ್ದೇಶಕನ ಎಂಟ್ರಿ ಆಯ್ತು. ದರ್ಶನ್ ಅವರಿಗಾಗಿ `ದಾಸ',`ಸರ್ದಾರ',`ತಂಗಿಗಾಗಿ' ಮತ್ತು `ಶಾಸ್ತ್ರೀ' ಚಿತ್ರಗಳನ್ನು ನಿರ್ದೇಶಿಸಿದ್ದರು. ಶಿವಣ್ಣನ `ಡಾನ್',`ಹ್ಯಾಟ್ರಿಕ್ ಹೊಡಿ ಮಗ',`ಸುಗ್ರೀವ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಸತ್ಯ ಸುದೀಪ್ ರ `ಗೂಳಿ' ಚಿತ್ರವನ್ನು ನಿರ್ದೇಶಿಸಿದ್ದರು.