ಪಿ.ಶೇಷಾದ್ರಿ ಜೀವನಚರಿತ್ರೆ

  ಪಿ. ಶೇಷಾದ್ರಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ. ಹಲವಾರು ಸಾಮಾಜಿಕ ವಿಷಯಗಳ ಮೇಲೆ ತಮ್ಮ ಚಿತ್ರಗಳ ಮೂಲಕ ಬೆಳಕು ಹರಿಸಿರುವ ಇವರು ಹಲವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1963 ನವೆಂಬರ್ 23 ರಂದು ತುಮಕೂರು ಜಿಲ್ಲೆಯ ದಂಡಿನಶಿವರದಲ್ಲಿ ಜನಿಸಿದರು.

  ಸೀರಿಯಲ್ ಗಳ ನಿರ್ದೇಶನದಿಂದ ನಿರ್ದೇಶಕನಾಗಿ ಸಿನಿಪಯಣ ಆರಂಭಿಸಿದ ಇವರು 2000 ರಲ್ಲಿ ಮುನ್ನುಡಿ ಚಿತ್ರ ನಿರ್ದೇಶನ ಮಾಡಿದರು. ಕರಾವಳಿ ತೀರದಲ್ಲಿರುವ ಮುಸ್ಲಿಂ ಸಮುದಾಯದಲ್ಲಿ ತಾತ್ಕಾಲಿಕ ನಿಕಾ ಮತ್ತು ತಲಾಖ್ ಹೆಸರಿನಲ್ಲಿ ನೆಡೆಯುವ ಶೋಷಣೆಗಳನ್ನು ತೆರೆದಿಟ್ಟರು. ಈ ಚಿತ್ರ 48 ನೇ ರಾಷ್ಟ್ರ ಪ್ರಶಸ್ತಿ ಮತ್ತು ಅಮೇರಿಕಾದ ಪಾಮ್ ಪ್ರಶಸ್ತಿ  ಪಡೆಯಿತು.

  ನಂತರ 2002 ರಲ್ಲಿ ತೆರೆಕಂಡ ಪ್ರಕಾಶ್ ರಾಜ್ ಮತ್ತು ದತ್ತಣ್ಣ ಅಭಿನಯದ `ಅತಿಥಿ' ಚಿತ್ರ ಉಗ್ರವಾದ ಮತ್ತು ಅದನ್ನು ಬೆಳೆಸುವ ಮನಸ್ಥಿತಿಯನ್ನು ತೆರೆದಿಟ್ಟಿತು. ಈ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿ ಮತ್ತು ಆರು ರಾಜ್ಯ ಪ್ರಶಸ್ತಿ ಜೊತೆಗೆ ಕೆಲ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು.

  ನಂತರ ಇವರ ನಿರ್ದೇಶನದಲ್ಲಿ ಮೂಡಿಬಂದ ಬೇರು, ತುತ್ತೂರಿ, ವಿಮುಕ್ತಿ, ಬೆಟ್ಟದ ಜೀವ, ಭಾರತ ಸ್ಟೋರ್ಸ್ ಮುಂತಾದ ಒಂದಕ್ಕಿಂತ ಒಂದು ಭಿನ್ನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಬಹುತೇಕ ಚಿತ್ರಗಳು ಒಂದಲ್ಲಾ ಒಂದು ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿವೆ. 

  2018 ರಲ್ಲಿ ಇವರು ನಿರ್ದೇಶಿಸಿದ ಕಾರಂತರ ಕೃತಿ ಆಧಾರಿತ ಮೂಕಜ್ಜಿಯ ಕನಸುಗಳು' ಚಿತ್ರ ರಾಷ್ಟೀಯ ಆರ್ಕೈವ್ ಗೆ ಆಯ್ಕೆಯಾಯಿತು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X