ಪದ್ಮಜಾ ರಾವ್ ಜೀವನಚರಿತ್ರೆ

  ಪದ್ಮಜಾ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಕಿರುತೆರೆ ನಿರ್ದೇಶಕಿ. ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಪದ್ಮಜಾ ರಾವ್ ವೈಶಾಲಿ ಕಾಸರವಳ್ಳಿಯವರ `ಮೂಡಲ ಮನೆ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಮುಖ್ಯಭೂಮಿಕೆಗೆ ಬಂದರು.ನಂತರ ಸಾಕಷ್ಟು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ ಪದ್ಮಜಾರವರು ರವಿಚಂದ್ರನ್ ರವರ ಹಠವಾದಿ ಚಿತ್ರದ ಮೂಲಕ ಹಿರಿತೆರೆಗೆ ಪ್ರವೇಶಿಸಿದರು. ಈ ಚಿತ್ರದಲ್ಲಿನ ತಾಯಿಯ ಪಾತ್ರದಿಂದ ಗಮನ ಸೆಳೆದ ಇವರು ನಂತರ `ಮುಂಗಾರು ಮಳೆ' ಚಿತ್ರದ ಮೂಲಕ ಜನಮಾನಸಕ್ಕೆ ತುಂಬಾ ಹತ್ತಿರವಾದರು. ನಂತರ ಪಾತ್ರಗಳ ಏಕತಾನತೆಯಿಂದ ಬೇಸರಗೊಂಡ ಪದ್ಮಜಾರವರು ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. 
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X