Celebs » Pooja Gandhi » Biography
ಜೀವನಚರಿತ್ರೆ

ಪೂಜಾ ಗಾಂಧಿ  ಕನ್ನಡ, ತಮಿಳು,  ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಜನಿಸಿದ್ದು ಅಕ್ಟೋಬರ್ 07, 1983 ರಲ್ಲಿ. ಇವರು ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೀರತ್, ಸೋಫಿಯಾ ಕಾನ್ವೆಂಟ್ ಶಾಲ್ಲೆಯಲ್ಲಿ.  ಇವರು "ಮುಂಗಾರು ಮಳೆ" ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಗುರುತಿಸಿಕೊಂಡರು.

ಯೋಗರಾಜ್ ಭಟ್ ನಿರ್ದೇಶನದ "ಮುಂಗಾರು ಮಳೆ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ಈ ಚಿತ್ರವೂ ಕನ್ನಡ ಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿತು. ಮುಂಗಾರು ಮಳೆ ಚಿತ್ರದಿಂದ ಇವರು ಮಳೆಯ ಹುಡುಗಿ ಎಂದೇ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮಿಲನ, ಬುದ್ದಿವಂತ, ದಂಡುಪಾಳ್ಯ, ತಾಜ್ ಮಹಲ್, ಹೀಗೆ ಹಲವು ಕನ್ನಡ ಚಿತ್ರಗಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾಗಳ ಜೊತೆಗೆ ಬಂಗಾಳಿ, ತಮಿಳು, ಮಲಯಾಳಂ, ಚಿತ್ರ ರಂಗದಲ್ಲಿ  ಗುರುತಿಸಿಕೊಂಡಿದ್ದಾರೆ. ಇವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada