X
ಪ್ರಭಾಸ್
Actor

ಪ್ರಭಾಸ್ ಜೀವನ ಚರಿತ್ರೆ


ಬಾಹುಬಲಿ ಸರಣಿ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರಭಾಸ್ ಅವರ ಪೂರ್ಣ ಹೆಸರು ಉಪ್ಪಾಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು. ಇವರು 1979ರ ಅಕ್ಟೋಬರ್ 23ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣ ರಾಜು ಮತ್ತು ತಾಯಿ ಶಿವಕುಮಾರಿ. ಪ್ರಭಾಸ್‌ಗೆ ಒಬ್ಬ ಹಿರಿಯ ಸಹೋದರ ಮತ್ತು ಸಹೋದರಿಯರಿದ್ದಾರೆ.

 

ತೆಲುಗಿನ ಖ್ಯಾತ ನಟ ಕೃಷ್ಣಂ ರಾಜು ಇವರ ಚಿಕ್ಕಪ್ಪ. ಭೀಮಾವರಂನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಪ್ರಭಾಸ್, ಹೈದರಾಬಾದ್‌ನಲ್ಲಿ ಬಿ.ಟೆಕ್ ಶಿಕ್ಷಣ ಮುಗಿಸಿದರು. 2002ರಲ್ಲಿ ಈಶ್ವರ ಚಿತ್ರದಿಂದ ಸಿನಿಜರ್ನಿ ಆರಂಭಿಸದ ಇವರು, ಮುಂದೆ ವರ್ಷಂ, ಛತ್ರಪತಿ, ಬಿಲ್ಲಾ , ಮಿರ್ಚಿ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಪ್ರಭಾಸ್ ಬಾಹುಬಲಿ ಚಿತ್ರಗಳ ಅಭೂತಪೂರ್ವ ಯಶಸ್ಸಿನ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.





 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+