1999 ರಲ್ಲಿ ಕುವೆಂಪುರವರ ಕಾದಂಬರಿ ಆಧಾರಿತ`ಕಾನೂರು ಹೆಗ್ಗಡತಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಬೆಳವಾಡಿಯವರು ಕನ್ನಡ ಮಾತ್ರವಲ್ಲದೇ ತಮಿಳು,ತೆಲುಗು,ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಅಭಿನಯಿಸಿದ್ದಾರೆ.
2002 ರಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ `ಸ್ಟಂಬಲ್' ರಾಷ್ಟ್ರಪ್ರಶಸ್ತಿ ಪಡೆಯಿತು.
ಯುವಪೀಳೆಗೆಗೆ ಚಿತ್ರನಿರ್ಮಾಣದಲ್ಲಿ ತರಬೇತಿ ನೀಡಲು ಇವರು ಬೆಂಗಳೂರಿನಲ್ಲಿ ಸುಚಿತ್ರಾ ಸ್ಕೂಲ್ ಆಫ್ ಆರ್ಟ್ಸ ಸ್ಥಾಪಿಸಿದ್ದಾರೆ.