ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ ಇವರ ಅಭಿನಯ ನೋಡಿ ಮೆಚ್ಚಿಕೊಂಡ ಜಯಂತ ಕಾಯ್ಕಿಣಿ ಚಿತ್ರರಂಗದಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದರು.
ಮುಂದೆ 'ಪರಮಾತ್ಮ' ಚಿತ್ರದಿಂದ ಸಿನಿದುನಿಯಾ ಪ್ರವೇಶಿಸಿದ ಪ್ರಶಾಂತ್, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಗೆ ಬಂಗಾರ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.