CelebsbredcrumbPrathambredcrumbBiography

  ಪ್ರಥಮ್ ಜೀವನಚರಿತ್ರೆ

  ಬಿಗ್ ಬಾಸ್ ನಿಂದ ಚಿರಪರಿಚಿತರಾದ 'ಪಿಟೀಲು' ಪ್ರಥಮ್ ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲಗಪುರ ನಿವಾಸಿ ಸರ್ಕಾರಿ ಕೆಲಸದಲ್ಲಿ ಇರುವ ಸಿ.ಮಲ್ಲಣ್ಣ ಹಾಗೂ ಗೃಹಿಣಿ ಲಕ್ಷ್ಮಿ ದಂಪತಿಯ ಪುತ್ರ.

  ಪ್ರಥಮ್ ಮೈಸೂರಿನ ಟಿ.ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಥಮ್, ಚಿಕ್ಕವಯಸ್ಸಿನಲ್ಲಿಯೇ ಆಶು ಕವಿತೆ ಬರೆದು ಅನೇಕ ಬಾರಿ ಬಹುಮಾನ ಗಿಟ್ಟಿಸಿದ್ದಾರೆ.

  ಆರನೇ ತರಗತಿ ಓದುವಾಗ್ಲಿಂದ್ಲೂ ಪ್ರಥಮ್ ಗೆ 'ಸಿನಿಮಾ ನಿರ್ದೇಶಕ'ನಾಗುವ ಬಯಕೆ ಇತ್ತು. ಆಸೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಧ್ವನಿ ಎತ್ತಿ ಚಿರಪರಿಚಿತರಾಗಿದ್ದ ಪ್ರಥಮ್, ಬಗ್ ಬಾಸ್ ಸೀಜನ್ 4ಗೆ ಎಂಟ್ರಿಕೊಟ್ಟು ವಿನ್ನರ್ ಆಗಿದ್ದರು.

  ಅಂದಿನಿಂದ ಪ್ರಥಮ್ ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿಗಳಿಸಿದರು. ಸಂಜು ಮತ್ತು ನಾನು ಸೇರಿದಂತೆ ಕೆಲ ಕನ್ನಡ ಕಿರುತೆರೆಗಳಲ್ಲಿ ಪ್ರಥಮ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 'ದೇವ್ರನ್ನೆ ಬುಡು ಗುರು' ಕನ್ನಡ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X