twitter

    ಪೃಥ್ವಿರಾಜ್ ಕಪೂರ್ ಜೀವನಚರಿತ್ರೆ

    ಪೃಥ್ವಿರಾಜ್ ಕಪೂರ್ ಭಾರತೀಯ ಚಿತ್ರರಂಗದ ಮೊದಲ ನಾಯಕ ನಟರಲ್ಲೊಬ್ಬರು. ರಂಗಭೂಮಿ ಹಿನ್ನಲೆಯಿಂದ ಬಂದು ಭಾರತೀಯ ಚಿತ್ರರಂಗವನ್ನಾಳಿದ ಇವರ ಸಾಧನೆ ಅಪಾರ. ಇವರ ಪುತ್ರರಾದ ರಾಜ್ ಕಪೂರ್, ಶಮ್ಮಿ ಕಪೂರ್, ಮೊಮ್ಮಕ್ಕಳಾದ ರಿಷಿ ಕಪೂರ್, ರಣಧೀರ ಕಪೂರ್ ಮತ್ತು ಮರಿ ಮೊಮ್ಮಕ್ಕಳಾದ ರಣಬೀರ್ ಕಪೂರ್, ಕರೀನಾ ಕಪೂರ್ ಮುಂತಾದವರು ಬಾಲಿವುಡ್ ಚಿತ್ರರಂಗದಲ್ಲಿ ಅಪಾರ ಹೆಸರು ಗಳಿಸಿದ್ದಾರೆ.

    1906 ನವೆಂಬರ್ 3 ರಂದು ಬ್ರಿಟಿಷ್ ಭಾರತದ ಪಂಜಾಬಿನಲ್ಲಿ ಜನಿಸಿದರು. ಪೇಶಾವರ್, ಫೈಸಲಾಬಾದ್ ಗಳಲ್ಲಿ ನಾಟಕ ಮಾಡುತ್ತಿದ್ದ ಇವರು 1928 ರಲ್ಲಿ ಮುಂಬೈಗೆ ಬಂದು ಇಂಪೀರಿಯಲ್ ಫಿಲ್ಮ್ ಕಂಪನಿ ಸೇರಿದರು. ಕೆಲವು ಮೂಕಿ ಚಿತ್ರಗಳಲ್ಲಿ ನಟಿಸಿದ್ದ ಇವರು ಭಾರತದ ಮೊದಲ ಟಾಕಿ ಚಿತ್ರ ಅಲಂ ಅರಾದಲ್ಲಿ ಕೂಡ ನಟಿಸಿದ್ದರು.

     

    ಕನ್ನಡದಲ್ಲಿ ಡಾ.ರಾಜಕುಮಾರ್ ಮೇಲೆ ಅಪಾರ ಪ್ರೀತಿ ಹೊಂದಿದ್ದ ಇವರು ರಾಜ್ ರನ್ನು ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಕೇಳಿಕೊಂಡಿದ್ದರು. ಆದರೆ ರಾಜ್ ವಿನಯವಾಗಿ ನಿರಾಕರಿಸಿದಾಗ, ತಾವೇ `ಸಾಕ್ಷಾತ್ಕಾರ' ಚಿತ್ರದಲ್ಲಿ ರಾಜ್ ತಂದೆ ಪಾತ್ರದಲ್ಲಿ ನಟಿಸಿದರು. ಇದು ಪೃಥ್ವಿರಾಜ್ ರವರು ನಟಿಸಿದ ಏಕೈಕ ದಕ್ಷಿಣ ಬಾರತೀಯ ಚಿತ್ರ. ಈ ಚಿತ್ರದಲ್ಲಿ ರಾಜ್ ತಂದೆ ಪಾತ್ರದಲ್ಲಿ ನಟಿಸಿದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X