twitter
    Celebs»Puttanna Kanagal»Biography

    ಪುಟ್ಟಣ್ಣ ಕಣಗಾಲ್ ಜೀವನಚರಿತ್ರೆ

    ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸೃಜನಶೀಲ ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಕಾದಂಬರಿ ಆಧಾರಿತ ಸಂದೇಶಭರಿತ ಚಿತ್ರಗಳಿಂದಲೇ ಪ್ರಸಿದ್ಧರಾಗಿರುವ ಇವರು ಕನ್ನಡ ಚಿತ್ರರಂಗದಲ್ಲಿ ಚಿತ್ರಬ್ರಹ್ಮನೆಂದೇ ಕರೆಸಿಕೊಳ್ಳುತ್ತಾರೆ.

    ಬಾಲ್ಯ

    ಪಿರಿಯಾಪಟ್ಟಣದ ಕಣಗಾಲ್ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣರ ಬಾಲ್ಯದ ಹೆಸರು `ಶುಭ್ರವೇಷ್ಟಿ ರಾಮಸ್ವಾಮಿ ಸೀತಾರಾಮ ಶರ್ಮ'. ಬಡತನವೇ ತಾಂಡವಾಡುತ್ತಿದ್ದ ಕುಟುಂಬದಲ್ಲಿ ಜನಿಸದ ಇವರು ಹೊಟ್ಟೆಪಾಡಿಗಾಗಿ ಮಾಡದೇ ಇರುವ ಕೆಲಸವಿಲ್ಲ. ಕ್ಲೀನರ್, ಸೇಲ್ಸ್‌ಮನ್, ಶಿಕ್ಷಕ ನಂತರ ಚಿತ್ರ ಪ್ರಚಾರಕರಾಗಿ ದುಡಿದರು.

    ಚಿತ್ರರಂಗ ಪ್ರವೇಶ

    ಚಿತ್ರಪ್ರಚಾರಕರಾಗಿ ಕೆಲಸ ಮಾಡುವ ಸಂಧರ್ಭದಲ್ಲಿ `ಬಿ.ಆರ್.ಪಂತುಲು'ರ ಸನಿಹಕ್ಕೆ ಬಂದ ಪುಟ್ಟಣ್ಣ ನಂತರ ಪಂತುಲುರವರ ಕಾರ್ ಡ್ರೈವರ್ ಮತ್ತು ಸಹಾಯಕ ನಿರ್ದೇಶಕರಾಗಿ ದುಡಿದರು.1964 ರಲ್ಲಿ ಮಲಯಾಳಂ ಚಿತ್ರ `ಸ್ಕೂಲ್ ಮಾಸ್ಟರ್' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡ ಪುಟ್ಟಣರ ಮೊದಲ ಕನ್ನಡ ಚಿತ್ರ 1967 ರಲ್ಲಿ ತೆರೆಕಂಡ `ಬೆಳ್ಳಿಮೋಡ'. ನಂತರ ಸಾಲುಸಾಲಾಗಿ ಬಂದ ಇವರ `ಶರಪಂಜರ' ,`ಗೆಜ್ಜೆಪೂಜೆ',`ನಾಗರಹಾವು' ಮುಂತಾದ ಚಿತ್ರಗಳು ಕಲ್ಪನಾ,ವಿಷ್ಣುವರ್ಧನ್,ಅಂಬರೀಶ್,ಆರತಿ,ಲೀಲಾವತಿ,ಜಯಂತಿ,ಪದ್ಮಾ ವಾಸಂತಿ,ಶ್ರೀನಾಥ್, ರಜನಿಕಾಂತ್,ಜೈ ಜಗದೀಶ್,ರಾಮಕೃಷ್ಣ,ಅಪರ್ಣಾರಂತಹ ಪ್ರತಿಭಾವಂತಹ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿತು.

    ಟಿ.ಎಸ್.ನಾಗಾಭರಣ ಮತ್ತು ತಮಿಳಿನ ಪ್ರಸಿದ್ಧ ನಿರ್ದೇಶಕರಾದ ಎಸ್.ಪಿ.ಮುತ್ತುರಾಜ್, ಭರತರಾಜಾ ಪುಟ್ಟಣ್ಣನವರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಇವರು ಕೇವಲ ಕನ್ನಡ ಮಾತ್ರವಲ್ಲದೇ ತಮಿಳು,ಮಲಯಾಳಂ,ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೆಲವು ಚಿತ್ರಗಳನ್ನು ಮಾಡಿದ್ದಾರೆ.

    ಚಿತ್ರಗಳ ವೈಶಿಷ್ಟ್ಯ

    ಕನ್ನಡದಲ್ಲಿ ಸುಮಾರು 24 ಚಿತ್ರಗಳನ್ನು ನಿರ್ದೇಶಿಸಿರುವ ಇವರ ಚಿತ್ರಗಳನ್ನು ಕೇವಲ ಮಹಿಳಾ ಕೇಂದ್ರಿತ ಚಿತ್ರಗಳು ಎಂದು ಕೆಲವರು ಟೀಕಿಸಿದಾಗ ಸ್ವತಃ ಪುಟ್ಟಣ್ಣನವರೇ ಇದನ್ನು ಅಲ್ಲಗೆಳೆದಿದ್ದರು. ಇವರು ಚಿತ್ರಗಳು ಕಲಾತ್ಮಕ ಚಿತ್ರಗಳು ಮತ್ತು ಕಮರ್ಷಿಯಲ್ ಚಿತ್ರಗಳಿಗೆ ಸೇತುವೆಯಂತಿದ್ದವು. ಸಾಮಾಜಿಕ ಸಂದೇಶವನ್ನು ಪಾತ್ರಗಳ ಗಟ್ಟಿಯಾದ ಅಭಿನಯ, ಪರಿಣಾಮಕಾರಿ ದೃಶ್ಯಗಳ ಮೂಲಕ ತೋರಿಸುತ್ತಿದ್ದರು. ಪುಟ್ಟಣ್ಣರಿಗಿಂತ ಹಿರಿಯರಾದ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ.ಬಾಲಚಂದರ್ ಇವರನ್ನು ಗುರುಗಳೆಂದು ಪರಿಗಣಿಸುತ್ತಿದಿದ್ದು ಇವರ ಕ್ರಿಯಾತ್ಮಕತೆಗೆ ಹಿಡಿದ ಕನ್ನಡಿ.

    ವೈಯಕ್ತಿಕ ಜೀವನ

    ಬಾಲ್ಯದಲ್ಲಿಯೇ ನಾಗಲಕ್ಷ್ಮಿ ಎಂಬವರನ್ನು ಮದುವೆಯಾಗಿದ್ದ ಪುಟ್ಟಣ್ಣರಿಗೆ ಈ ವಿವಾಹದಿಂದ ಐದು ಮಕ್ಕಳಿದ್ದರು. ನಂತರ 80 ರ ದಶಕದ ಉತ್ತರಾರ್ಧದಲ್ಲಿ ನಟಿ ಆರತಿಯ ಪ್ರೇಮಪಾಶಕ್ಕೆ ಸಿಲುಕಿದ ಇವರು 1976 ರಿಂದ 1981 ರವರೆಗೆ ಆರತಿಯವರ ಜೊತೆ ವೈವಾಹಿಕ ಜೀವನ ನೆಡೆಸಿದರು. ಈ ದಂಪತಿಗೆ ಯಶಸ್ವಿನಿ ಎಂಬ ಮಗು ಕೂಡಾ ಇತ್ತು . 1981 ರಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ದೂರವಾಯಿತು. ಪುಟ್ಟಣ್ಣನವರು ಇದೇ ದುಃಖದಲ್ಲಿ ಮಾನಸ ಸರೋವರ ಚಿತ್ರ ಮಾಡಿ ತಮ್ಮ ದುಃಖ ಹೊರ ಹಾಕಿದರು.

    1985 ರಲ್ಲಿ ಮಸಣದ ಹೂವು ಚಿತ್ರೀಕರಣದ ಸಮಯದಲ್ಲಿ ಪುಟ್ಟಣ್ಣ ವಿಧಿವಶರಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X