X
ಹೋಮ್ » ಸೆಲಬ್ರಿಟಿಗಳು » ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್

ಪುಟ್ಟಣ್ಣ ಕಣಗಾಲ್

Director/Story Writer/Screenplay Writer
ಜೀವನ ಚರಿತ್ರೆ :  ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸೃಜನಶೀಲ ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಕಾದಂಬರಿ ಆಧಾರಿತ ಸಂದೇಶಭರಿತ ಚಿತ್ರಗಳಿಂದಲೇ ಪ್ರಸಿದ್ಧರಾಗಿರುವ ಇವರು ಕನ್ನಡ ಚಿತ್ರರಂಗದಲ್ಲಿ ಚಿತ್ರಬ್ರಹ್ಮನೆಂದೇ ಕರೆಸಿಕೊಳ್ಳುತ್ತಾರೆ. ಬಾಲ್ಯ ಪಿರಿಯಾಪಟ್ಟಣದ ಕಣಗಾಲ್ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣರ ಬಾಲ್ಯದ ಹೆಸರು `ಶುಭ್ರವೇಷ್ಟಿ ರಾಮಸ್ವಾಮಿ ಸೀತಾರಾಮ ಶರ್ಮ'. ಬಡತನವೇ ತಾಂಡವಾಡುತ್ತಿದ್ದ ಕುಟುಂಬದಲ್ಲಿ ಜನಿಸದ ಇವರು ಹೊಟ್ಟೆಪಾಡಿಗಾಗಿ ಮಾಡದೇ ಇರುವ ಕೆಲಸವಿಲ್ಲ. ಕ್ಲೀನರ್, ಸೇಲ್ಸ್‌ಮನ್, ಶಿಕ್ಷಕ ನಂತರ ಚಿತ್ರ ಪ್ರಚಾರಕರಾಗಿ ದುಡಿದರು. ಚಿತ್ರರಂಗ ಪ್ರವೇಶ ಚಿತ್ರಪ್ರಚಾರಕರಾಗಿ ಕೆಲಸ ಮಾಡುವ ಸಂಧರ್ಭದಲ್ಲಿ `ಬಿ.ಆರ್.ಪಂತುಲು'ರ ಸನಿಹಕ್ಕೆ ಬಂದ ಪುಟ್ಟಣ್ಣ ನಂತರ ಪಂತುಲುರವರ ಕಾರ್ ಡ್ರೈವರ್ ಮತ್ತು ಸಹಾಯಕ ನಿರ್ದೇಶಕರಾಗಿ ದುಡಿದರು.1964 ರಲ್ಲಿ ಮಲಯಾಳಂ ಚಿತ್ರ `ಸ್ಕೂಲ್ ಮಾಸ್ಟರ್' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡ ಪುಟ್ಟಣರ ಮೊದಲ ಕನ್ನಡ ಚಿತ್ರ 1967 ರಲ್ಲಿ ತೆರೆಕಂಡ `ಬೆಳ್ಳಿಮೋಡ'. ನಂತರ ಸಾಲುಸಾಲಾಗಿ ಬಂದ ಇವರ `ಶರಪಂಜರ' ,`ಗೆಜ್ಜೆಪೂಜೆ',`ನಾಗರಹಾವು' ಮುಂತಾದ ಚಿತ್ರಗಳು ಕಲ್ಪನಾ,ವಿಷ್ಣುವರ್ಧನ್,ಅಂಬರೀಶ್,ಆರತಿ,ಲೀಲಾವತಿ,ಜಯಂತಿ,ಪದ್ಮಾ ವಾಸಂತಿ,ಶ್ರೀನಾಥ್, ರಜನಿಕಾಂತ್,ಜೈ ಜಗದೀಶ್,ರಾಮಕೃಷ್ಣ,ಅಪರ್ಣಾರಂತಹ ಪ್ರತಿಭಾವಂತಹ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿತು. ಟಿ.ಎಸ್.ನಾಗಾಭರಣ ಮತ್ತು ತಮಿಳಿನ ಪ್ರಸಿದ್ಧ ನಿರ್ದೇಶಕರಾದ ಎಸ್.ಪಿ.ಮುತ್ತುರಾಜ್, ಭರತರಾಜಾ ಪುಟ್ಟಣ್ಣನವರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.ಇವರು ಕೇವಲ ಕನ್ನಡ ಮಾತ್ರವಲ್ಲದೇ ತಮಿಳು,ಮಲಯಾಳಂ,ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೆಲವು ಚಿತ್ರಗಳನ್ನು ಮಾಡಿದ್ದಾರೆ. ಚಿತ್ರಗಳ ವೈಶಿಷ್ಟ್ಯ ಕನ್ನಡದಲ್ಲಿ ಸುಮಾರು 24 ಚಿತ್ರಗಳನ್ನು ನಿರ್ದೇಶಿಸಿರುವ ಇವರ ಚಿತ್ರಗಳನ್ನು ಕೇವಲ ಮಹಿಳಾ ಕೇಂದ್ರಿತ ಚಿತ್ರಗಳು ಎಂದು ಕೆಲವರು ಟೀಕಿಸಿದಾಗ ಸ್ವತಃ ಪುಟ್ಟಣ್ಣನವರೇ ಇದನ್ನು ಅಲ್ಲಗೆಳೆದಿದ್ದರು. ಇವರು ಚಿತ್ರಗಳು ಕಲಾತ್ಮಕ ಚಿತ್ರಗಳು ಮತ್ತು ಕಮರ್ಷಿಯಲ್ ಚಿತ್ರಗಳಿಗೆ ಸೇತುವೆಯಂತಿದ್ದವು. ಸಾಮಾಜಿಕ ಸಂದೇಶವನ್ನು ಪಾತ್ರಗಳ ಗಟ್ಟಿಯಾದ ಅಭಿನಯ, ಪರಿಣಾಮಕಾರಿ ದೃಶ್ಯಗಳ ಮೂಲಕ ತೋರಿಸುತ್ತಿದ್ದರು. ಪುಟ್ಟಣ್ಣರಿಗಿಂತ ಹಿರಿಯರಾದ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ.ಬಾಲಚಂದರ್ ಇವರನ್ನು ಗುರುಗಳೆಂದು ಪರಿಗಣಿಸುತ್ತಿದಿದ್ದು ಇವರ ಕ್ರಿಯಾತ್ಮಕತೆಗೆ ಹಿಡಿದ ಕನ್ನಡಿ. ವೈಯಕ್ತಿಕ ಜೀವನ ಬಾಲ್ಯದಲ್ಲಿಯೇ ನಾಗಲಕ್ಷ್ಮಿ ಎಂಬವರನ್ನು ಮದುವೆಯಾಗಿದ್ದ ಪುಟ್ಟಣ್ಣರಿಗೆ ಈ ವಿವಾಹದಿಂದ ಐದು ಮಕ್ಕಳಿದ್ದರು. ನಂತರ 80 ರ ದಶಕದ ಉತ್ತರಾರ್ಧದಲ್ಲಿ ನಟಿ ಆರತಿಯ ಪ್ರೇಮಪಾಶಕ್ಕೆ ಸಿಲುಕಿದ ಇವರು 1976 ರಿಂದ 1981 ರವರೆಗೆ ಆರತಿಯವರ ಜೊತೆ ವೈವಾಹಿಕ ಜೀವನ ನೆಡೆಸಿದರು. ಈ ದಂಪತಿಗೆ ಯಶಸ್ವಿನಿ ಎಂಬ ಮಗು ಕೂಡಾ ಇತ್ತು . 1981 ರಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ದೂರವಾಯಿತು. ಪುಟ್ಟಣ್ಣನವರು ಇದೇ ದುಃಖದಲ್ಲಿ ಮಾನಸ ಸರೋವರ ಚಿತ್ರ ಮಾಡಿ ತಮ್ಮ ದುಃಖ ಹೊರ ಹಾಕಿದರು. 1985 ರಲ್ಲಿ ಮಸಣದ ಹೂವು ಚಿತ್ರೀಕರಣದ ಸಮಯದಲ್ಲಿ ಪುಟ್ಟಣ್ಣ ವಿಧಿವಶರಾದರು.
ಮುಂದೆ ಓದಿ

ಪುಟ್ಟಣ್ಣ ಕಣಗಾಲ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪುಟ್ಟಣ್ಣ ಕಣಗಾಲ್ 1984
as Screenplay Writer
ಪುಟ್ಟಣ್ಣ ಕಣಗಾಲ್ 1982

ಪುಟ್ಟಣ್ಣ ಕಣಗಾಲ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪುಟ್ಟಣ್ಣ ಕಣಗಾಲ್

ಹೆಸರು ಪುಟ್ಟಣ್ಣ ಕಣಗಾಲ್
ಹುಟ್ಟಿದ ದಿನ 01 Dec 1933
ವಯಸ್ಸು 93
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪುಟ್ಟಣ್ಣ ಕಣಗಾಲ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+