ರಾಮ್ ರೆಡ್ಡಿ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ಸಾಹಿತಿ ಮತ್ತು ಛಾಯಾಗ್ರಾಹಕರು. ಇವರ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ `ಕೆ.ಸಿ.ರೆಡ್ಡಿ'ಯವರ ಮೊಮ್ಮಗ. ಇವರ ತಾಯಿ ಖ್ಯಾತ ಸಮಾಜಸೇವಕಿ ಪದ್ಮಶ್ರೀ ಪುರಸ್ಕೃತೆ ಅನಿತಾ ರೆಡ್ಡಿ.
ಇವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಿಂದ ಪದವಿ ಪಡೆದ ನಂತರ ಚಿತ್ರ ನಿರ್ದೇಶನ ಕಲಿಯಲು ಪ್ರತಿಷ್ಟಿತ ಜೆಕ್ ಗಣರಾಜ್ಯದ ಪ್ರೇಗ್ ಫಿಲ್ಮ್ ಸ್ಕೂಲ್ ಗೆ ಹೋದರು. ಅಲ್ಲಿಂದ ಮರಳಿದ ಇವರು ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿದ ತೆಲುಗು ಕಿರುಚಿತ್ರ `ಇಕಾ' 21 ಅಂತರಾಷ್ಟ್ರೀಯ ಫಿಲ್ಮ್ಸ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡಿತು.
ತಮ್ಮ 16 ನೇ ವಯಸ್ಸಿನಲ್ಲಿಯೇ ತಾವು ಸೆರೆಹಿಡಿದ ಛಾಯಾಚಿತ್ರಗಳನ್ನು `ಟೈಮ್ ಆಂಡ್ ಸ್ಫೇಸ್ ಗ್ಯಾಲರಿಯ ವೈಲ್ಡ್ ಫೋಟೋಗ್ರಾಫಿ ಪ್ರದರ್ಶನದಲ್ಲಿ ಪ್ರದರ್ಶಿಸಿದರು. 21 ನೇ ವಯಸ್ಸಿನಲ್ಲಿಯೇ `It's raining in Maya' ಎಂಬ ಪುಸ್ತಕ ಬರೆದರು.
ಇವರು 2016 ರಲ್ಲಿ ನಿರ್ದೇಶಿಸಿದ `ತಿಥಿ' ಚಿತ್ರ ಸ್ವಿಟ್ಜರ್ಲ್ಯಾಂಡ್ ನ ಗೋಲ್ಡನ್ ಲೇಪಾರ್ಡ ಪ್ರಶಸ್ತಿ ಜೊತೆಗೆ 63 ನೇ ರಾಷ್ಟ್ರಪ್ರಶಸ್ತಿ ಪಡೆಯಿತು.
ಇವರು 2016 ರ ಫೆಬ್ರವರಿಯ ಫೋರ್ಬ್ಸ್ ನ 30 ಯುವ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.