Celebs » Radhika Pandit » Biography
ಜೀವನಚರಿತ್ರೆ

ರಾಧಿಕಾ ಪಂಡಿತ್  ಇವರು ಮಾರ್ಚ್ 07, 1984 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು.  ಇವರ ತಂದೆ ಕೃಷ್ಣಪ್ರಸಾದ್ ಪಂಡಿತ್ . ತಾಯಿ, ಮಂಗಳಾ.  ರಾಧಿಕಾ ಪಂಡಿತ್ ತಮ್ಮ  ಬಾಲ್ಯ ವಿದ್ಯಾಭ್ಯಾಸವನ್ನು  ಕ್ಲ್ಲೊನಿ ಕಾನ್ವೆಂಟ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.,  ನಂತರ ಇವರು ಮೌಂಟ್ ಕಾರ್ಮೆಲ್ ಕಾಲೇಜ್ (ಬೆಂಗಳೂರು) ನಲ್ಲಿ ವಾಣಿಜ್ಯ (ಬಿ ಕಾಂ) ಮುಗಿಸಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಕೋರ್ಸ್ ಮುಗಿಸಿದ ನಂತರ  ಶಿಕ್ಷಕಿ ಆಗಬೇಕೆಂದು ಅಪೇಕ್ಷಿಸಿದ್ದರು.

2007 ರಲ್ಲಿ, ಬಿ ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಅಶೋಕ್ ಕಶ್ಯಪ್ ನಿರ್ದೇಶನದ ಕನ್ನಡ ಭಾಷೆಯ "ನಂದಾ ಗೋಕುಲ" ಎಂಬ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದರು. ಅದೇ ವರ್ಷ ಮತ್ತೊಂದು ಧಾರಾವಾಹಿ ಸುಮಂಗಲಿನಲ್ಲಿ ಕಾಣಿಸಿಕೊಂಡರು.  ಹೀಗೆ ಟಿವಿ ಕಿರುತೆರೆಗಳಲ್ಲಿ ನಟಿಸುವ ಮೂಲಕ  " ಮೊಗ್ಗಿನ ಮನಸ್ಸು" ಕನ್ನಡ ಚಿತ್ರದ ಮೂಲಕ ಪ್ರಪ್ರಥಮವಾಗಿ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದರು. ಈ ಚಿತ್ರಕ್ಕೆ ಇವರಿಗೆ ಫಿಲ್ಮ್ ಫೇರ್ ಮತ್ತು  ರಾಜ್ಯ ಪ್ರಶಸ್ತಿ ನೀಡಲಾಯಿತು.

2012 ರಲ್ಲಿ,  ಬಿಡುಗಡೆಗೊಂಡ ಯೋಗರಾಜ್ ಭಟ್ ರ "ಡ್ರಾಮಾ" ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಯಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದರಿಂದ ರಾಧಿಕಾ ಅವರಿಗೂ ಸಹ ಒಳ್ಳೆ ಇಮೇಜ್ ಬಂತು. ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿಯಲ್ಲಿ ಪಂಡಿತ್ ಯಶ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.  ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯಿಸಿದ ಎಲ್ಲಾ ಚಿತ್ರಗಳಲ್ಲಿ ಈ ಜೊಡಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿವೆ.
ಹೀಗೆ ಅನೇಕ ನಟರೊಡನೆ ಅಭಿನಯಿಸಿರುವ ರಾಧಿಕಾ ಪಂಡಿತ್ ಈಗ ಕನ್ನಡ ಸಿನಿಮಾರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ.

ರಾಧಿಕಾ ಪಂಡಿತ್ ಅವರಿಗೆ ಲಭಿಸಿದ ಪ್ರಶಸ್ತಿಗಳು:
* ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ - ಮೊಗ್ಗಿನ ಮನಸ್ಸು(2009).
* ಸುವರ್ಣ ಫಿಲ್ಮ್ ಪ್ರಶಸ್ತಿ - ಜನಪ್ರಿಯ ನಟಿ - ಒಲವೇ ಜೀವನ ಲೆಕ್ಕಾಚಾರ(2010).
* ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ- ಲವ್ ಗುರು-(2010)
* ಸೌತ್ ಸಿನಿ ಪ್ರಶಸ್ತಿ- ಅತ್ಯುತ್ತಮ ನಟಿ- ಲವ್ ಗುರು-(2010)
* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ-ಅತ್ಯುತ್ತಮ ನಟಿ - ಮೊಗ್ಗಿನ ಮನಸ್ಸು(2010).
* ಬಿಗ್ ಕನ್ನಡ ಎಂಟರ್ ಟೈನ್ಮೆಂಟ್ ಪ್ರಶಸ್ತಿ.ವರ್ಷದ ಹಾಸ್ಯ ನಟಿ-ಕೃಷ್ನನ್ ಲವ್ ಸ್ಟೋರಿ(2011).
* ಸುವರ್ಣ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ನಟಿ- ಕೃಷ್ಣನ್ ಲವ್ ಸ್ಟೋರಿ(2011).
* ಉದಯ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ನಟಿ- ಕೃಷ್ಣನ್ ಲವ್ ಸ್ಟೋರಿ(2011).
* ಟಿವಿ9 ಸ್ಯಾಂಡಲ್ ವುಡ್ ಸ್ಟಾರ್ ಪ್ರಶಸ್ತಿ- ಅತ್ಯುತ್ತಮ ನಟಿ- ಹುಡುಗರು(2012).
* ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ - ಹುಡುಗರು(2012).
* ದಿ ಬೆಂಗಳೂರು ಟೈಮ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ - ಹುಡುಗರು(2012).
* ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ- ಅದ್ಧೂರಿ(2013).
* ಉದಯ ಫಿಲ್ಮ್ ಪ್ರಶಸ್ತಿ - ಅತ್ಯುತ್ತಮ ನಟಿ-  ಅದ್ಧೂರಿ(2013).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಫ್ರಶಸ್ತಿ -  ಅದ್ಧೂರಿ(2013).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಫ್ರಶಸ್ತಿ - ದಿಲ್ ವಾಲ(2014).
* ಸೌತ್ ಫಿಲ್ಮ್  ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2015).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಫ್ರಶಸ್ತಿ - ಅತ್ಯುತ್ತಮ ನಟಿ- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2015).
* IBNLive ಪ್ರಶಸ್ತಿ- ಅತ್ಯುತ್ತಮ ನಟಿ- ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2016).