ರಾಘವ ಲಾರೆನ್ಸ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ, ನಿರ್ದೇಶಕ, ನೃತ್ಯ ಸಂಯೋಜಕ ಮತ್ತು ಸಂಗೀತ ನಿರ್ದೇಶಕ. ನೃತ್ಯ ಸಂಯೋಜನೆಯಿಂದ ಮುನ್ನೆಲೆಗೆ ಬಂದ ರಾಘವ್ ಹಲವು ತಮಿಳು ಮತ್ತು ತೆಲಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅದ್ಭುತವಾಗಿ ನೃತ್ಯ ಮಾಡುವ ಇವರು ಹಲವು ಸಮಾಜಪರ ಚಟುವಟಿಕೆಗಳಲ್ಲಿ ಕೂಡ ತೊಡಗಿ ಕೊಂಡಿದ್ದಾರೆ. ಕಾಂಚನ ಚಿತ್ರಸರಣಿಗಳನ್ನು ನಿರ್ಮಿಸಿ ನಿರ್ದೇಶಿಸಿ ನಟಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.