ರಾಜ್ ಬಿ ಶೆಟ್ಟಿ ಕನ್ನಡದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ. ಮಂಗಳೂರು ಮೂಲದ ಇವರು 2017 ರಲ್ಲಿ ತೆರೆಕಂಡ `ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು.
ಮಂಗಳೂರಿನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಧ್ಯಾಭ್ಯಾಸ ಮುಗಿಸಿದ ರಾಜ್ ನಂತರ ರೋಷಿಣಿ ಸಮಾಜ ಸೇವಾ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದರು. ನಂತರ ಮಂಗಳೂರಿನ ಬಿಗ್ ಎಫ್.ಎಂ ನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿದರು.
ನಂತರ ನಾಟಕ ತಂಡ ಸೇರಿದ ರಾಜ್ ಕೆಲವೊಂದು ಸಾಕ್ಷ್ಯಚಿತ್ರಗಳನ್ನು ತಯಾರು ಮಾಡಿದರು. ರಾಜ್ ಒಂದು ಮೊಟ್ಟಯ ಕಥೆ ಎಂಬ ಕಿರು ಚಿತ್ರವನ್ನು ನಿರ್ದೇಶಿಸುವ ಹಂತದಲ್ಲಿದ್ದಾಗ ಸುಹಾನ್ ಪ್ರಸಾದ್ ಎಂಬುವವರ ಸಲಹೆ ಮತ್ತು ಸಹಾಯದಿಂದ ಕಿರುಚಿತ್ರದ ಬದಲಾಗಿ ಒಂದು ಚಲನಚಿತ್ರವನ್ನು ಮಾಡೋಣ ಎಂಬ ನಿರ್ಧಾರಕ್ಕೆ ಬಂದರು.